Friday 23 March 2018

ಎಸ್ ಬಿಐನಲ್ಲಿ 119 ಹುದ್ದೆಗಳಿವೆ ಕೂಡಲೇ ಅರ್ಜಿ ಹಾಕಿ!

ಎಸ್ ಬಿಐನಲ್ಲಿ 119 ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ!

Published:March 22 2018, 13:17 [IST]
ಬೆಂಗಳೂರು, ಮಾರ್ಚ್ 22: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2018ರ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿದೆ. ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದ ಎಸ್ ಬಿಐ ಈಗ 119ಕ್ಕೂ ಅಧಿಕ ವಿವಿಧ ಹುದ್ದಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

119 ಹುದ್ದೆಗಳ ಪೈಕಿ 35 ವಿಶೇಷ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್, 82 ಡೆಪ್ಯುಟಿ ಮ್ಯಾನೇಜರ್, 2 ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್ ಲೈನ್ ಮೂಲಕ ಏಪ್ರಿಲ್ 07, 2018ರೊಳಗೆ ಸಲ್ಲಿಸಬಹುದು.

ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ)
ಹುದ್ದೆ ಹೆಸರು: ಸ್ಪೆಷಲ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್.
ಒಟ್ಟು ಹುದ್ದೆಗಳು: 119
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07 ಏಪ್ರಿಲ್ 2018

ಸಂಬಳ:
* ವಿಶೇಷ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ : 42020 ರು ನಿಂದ 51490/-
* ಡೆಪ್ಯುಟಿ ಮ್ಯಾನೇಜರ್ : 31705 ರು ನಿಂದ 45950/-
* ಡೆಪ್ಯುಟಿ ಜನರಲ್ ಮ್ಯಾನೇಜರ್ : 68680 ರು ನಿಂದ 74520/-
ಮಾ.31ರ ನಂತರ ಈ 6 ಬ್ಯಾಂಕುಗಳ ಚೆಕ್ ಪಾಸಾಗಲ್ಲ!
ವಿದ್ಯಾರ್ಹತೆ:
* ಸ್ಪೆಷಲ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್ : ಸಿಎ/ಐಸಿಡಬ್ಲ್ಯೂಎ/ಎಸಿಎಸ್/ ಎಂಬಿಎ (ಹಣಕಾಸು ವಿಷಯ) ಅಥವಾ 2 ವರ್ಷಗಳ ಪಿಜಿ ಡಿಪ್ಲೋಮಾ
* ಡೆಪ್ಯುಟಿ ಮ್ಯಾನೇಜರ್ ಹಾಗೂ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನಿನ ಪದವಿ
ವಯೋಮಿತಿ:
* ಸ್ಪೆಷಲ್ ಮ್ಯಾನೇಜ್ಮೆಂಟ್ ಎಕ್ಸಿಕ್ಯೂಟಿವ್: 30 ರಿಂದ 40 ವರ್ಷ
* ಡೆಪ್ಯುಟಿ ಮ್ಯಾನೇಜರ್ : 42 ರಿಂದ 52 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜಾರ್ : 25 ರಿಂದ 35 ವರ್ಷ
ಎಸ್.ಬಿ.ಐನ ಅಧಿಕೃತ ವೆಬ್ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ನಂತರ ನೋಂದಣಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ಪ್ರಕ್ರಿಯೆಗಳನ್ನು ಆನ್ಲೈನ್ ನಲ್ಲೇ ನಡೆಸಬೇಕಾಗಿದೆ.


No comments:

Post a Comment