Wednesday 28 March 2018

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 20 ಸಾವಿರ ಹೆಚ್ಚುವರಿ ಹುದ್ದೆ ಘೋಷಣೆ

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ರೈಲ್ವೆ ಇಲಾಖೆಯಲ್ಲಿ 20 ಸಾವಿರ ಹೆಚ್ಚುವರಿ ಹುದ್ದೆ ಘೋಷಣೆ
29 March 2018, 7:50 am
ನವದೆಹಲಿ : ದೇಶದಲ್ಲಿ ಹೆಚ್ಚಿನ ಉದ್ಯೋಗವಕಾಶ ಸೃಷ್ಠಿಸುವ ಪ್ರಯತ್ನದಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ 20 ಸಾವಿರ ಹೆಚ್ಚುವರಿ ಹುದ್ದೆ ಘೋಷಣೆ ಮಾಡಲಾಗಿದೆ.

ರೈಲ್ವೆ ಇಲಾಖೆ ಈ ಹಿಂದೆ ಘೋಷಣೆ ಮಾಡಿದ್ದ 90 ಸಾವಿರ ಹುದ್ದೆಗಳನ್ನು 1, 10,000 ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ 20 ಸಾವಿರ ಹೆಚ್ಚುವರಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗಿದೆ. ರೈಲ್ವೆ ಇಲಾಖೆಯ ಪ್ರೊಟೆಕ್ಷನ್ ಮತ್ತು ರೈಲ್ವೆ ಸ್ಟೆಶಲ್ ಪ್ರೊಟೆಕ್ಷನ್ ಪೋರ್ಸ್ ನಲ್ಲಿ 9 ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗುವುದು ಎಂದು ತಿಳಿದು ಬಂದಿದ್ದು, ಮೇ ತಿಂಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಲಾಗುದು ಎಂದು ತಿಳಿದು ಬಂದಿದೆ.


ಇದರ ಜೊತೆಗೆ ಎಲ್-1 ಮತ್ತು ಎಲ್ -2 ವಿಭಾಗಗಳಲ್ಲಿ 10 ಸಾವಿರ ಹೆಚ್ಚುವರಿ ಉದ್ಯೋಗಗಳನ್ನು ರಚಿಸಲಾಗುವುದು ಎಂದು ಇಲಾಖೆ ತಿಳಿಸಿದೆ.


Monday 26 March 2018

KSRTC ನೇಮಕಾತಿ... ಒಟ್ಟು 726 ಹುದ್ದೆಗೆ ಅರ್ಜಿ ಆಹ್ವಾನ

KSRTC ನೇಮಕಾತಿ... ಒಟ್ಟು 726 ಹುದ್ದೆಗೆ ಅರ್ಜಿ ಆಹ್ವಾನ


Published:Monday, March 26, 2018, 9:30 [IST]
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 726 ತಾಂತ್ರಿಕ ಸಹಾಯಕ ದರ್ಜೆ -3 ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗೆ ಸಂಬಂಧಪಟ್ಟಂತೆ ಕಂಪ್ಲೀಟ್ ಮಾಹಿತಿ ಇಲ್ಲಿದೆ
ವಿದ್ಯಾರ್ಹತೆ:
ಪ್ರೌಢ ಶಿಕ್ಷಣ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಬಳಿಕ, ತಾಂತ್ರಿಕ ಮಂಡಳಿ ಅಥವಾ ಸರ್ಕಾರದಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಐ.ಟಿ.ಸಿ/ ಐಟಿಐ/ ಎನ್‌ಎಸಿ ಮೆಕ್ಯಾನಿಕಲ್/ ಡೀಸಲ್ ಮೆಕ್ಯಾನಿಕಲ್/ ಆಟೋ ಎಲಕ್ಟ್ರಿಷನ್/ ವೆಲ್ಡರ್/ ಶೀಟ್ ಮೆಟಲ್ ವರ್ಕರ್/ ಎಲೆಕ್ಟ್ರಾನಿಕ್ ಮೆಕ್ಯಾನಿಕ್ / ಅಪೋಲ್ ಸ್ಟ್ರಿ/ ಡ್ರಾಫ್ಡ್ ಮ್ಯಾನ್/ ಫಿಟ್ಟರ್/ ಮೆಷಿನಿಸ್ಟ್/ ಟೈರ್ ಫಿಟ್ಟಿಂಗ್/ ವಲ್ಕನೈಸಿಂಗ್/ ಪೈಂಟಿಂಗ್/ ರೆಫ್ರಿಜರೇಶನ್ ಏಂಡ್ ಏರ್ ಕಂಡೀಶನಿಂಗ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ವೃತ್ತಿಗಳಲ್ಲಿ ವಿದ್ಯಾರ್ಹತೆ ಹೊಂದಿರಬೇಕು

ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 25-4-2018 ರಂದು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಟ ವಯೋಮಿತಿ ಈ ಮುಂದೆ ನೀಡಿರುವಂತೆ ವಯಸ್ಸು ಮೀರಿರಬಾರದು. ಸಾಮಾನ್ಯ ವರ್ಗ : 35 ವರ್ಷ, 2ಎ,2ಬಿ,3ಎ, 3ಬಿ: 38 ವರ್ಷ, ಪ.ಜಾತಿ/ಪ.ಪಂಗಡ. ವರ್ಗ 1: 40 ವರ್ಷ
ದೇಹದಾರ್ಡ್ಯತೆ :
ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕನಿಷ್ಠ ಈ ಮುಂದಿನ ದೇಹದಾರ್ಡ್ಯತೆ ಹೊಂದಿರಬೇಕು. ಪುರುಷರು ಎತ್ತರ 163 ಸೆಂ.ಮೀ ತೂಕ 55 ಕೆಜಿ. ಮಹಿಳೆಯರು 153 ಸೆಂ.ಮೀ ತೂಕ 50 ಕೆಜಿ ಕಡ್ಡಾಯವಾಗಿ ಹೊಂದಿರಬೇಕು
ಶುಲ್ಕ ಪಾವತಿ ವಿವರ
ವರ್ಗ ಶುಲ್ಕ
ಸಾಮಾನ್ಯ, 2 ಎ, 2ಬಿ, 3ಎ ಮತ್ತು 3 ಬಿ 800 ರೂ
ಪ.ಜಾತಿ, ಪ. ಪಂಗಡ, ವರ್ಗ 1, ಮಾಜಿ ಸೈನಿಕ 500 ರೂ
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್ ಮುಖಾಂತರವೇ ಸಲ್ಲಿಸಬೇಕು. ಕರಾರಸಾ ನಿಮಗಮದ ಆಫೀಶಿಯಲ್ ವೆಬ್‌ಸೈಟ್ ಗೆ   ಭೇಟಿ ನೀಡಿ ಅರ್ಜಿ ಸಲ್ಲಿಸಿ. ಎಪ್ರಿಲ್ 5, 2018 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಎಪ್ರಿಲ್ 25, 2018 ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಗೊಳ್ಳಲಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.


Labels: JOB NEWS, KSRTC


Friday 23 March 2018

ಬೆಳಗಾವಿ ನಗರದಲ್ಲಿ 25ರಂದು ಭವ್ಯ ಉದ್ಯೋಗ ಮೇಳ.

ಬೆಳಗಾವಿ ನಗರದಲ್ಲಿ 25ರಂದು ಭವ್ಯ ಉದ್ಯೋಗ ಮೇಳ.
24 March 2018, 10:20 am
ಬೆಳಗಾವಿ: ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿರುವುದರಿಂದ ಮಾ.25 ರಂದು ನಗರದ ಚವಾಟಗಲ್ಲಿಯ ಮಾರುತಿ ಮಂಗಲ ಕಾರ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಡಾ. ರವಿ ಪಾಟೀಲ ಹೇಳಿದರು.
ಶುಕ್ರವಾರ ಕನ್ನಡ ಸಾಹಿತ್ಯ ಭವನದ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಮಾನವ ಸಂಪನ್ಮೂಲ ಒದಗಿಸುವುದರೊಂದಿಗೆ ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ನಗರದಲ್ಲಿ ಉದ್ಯೋಗಮೇಳ ಆಯೋಜಿಸಲಾಗುತ್ತಿದೆ ಎಂದರು.
ಆಧುನಿಕ ತಂತ್ರಜ್ಞಾನ ಸೇರಿದಂತೆ ಬ್ಯಾಂಕಿಂಗ್, ಟೆಕ್ನಫಲಜಿ, ಐಟಿ ಫಾರ್ಮಾ, ಇನ್ಸೂರೆನ್ಸ್, ರಿಲಾಯನ್ಸ್, ಸೊಡೆಕ್ಸೋ, ಯುರೆಕಾ ಪ್ರೋಬ್ರ್ಸ್, ಡಿ.ಎಂ.ಸಿ ಫಿನಿಶರ್, ಕೊಲ್ಲಾಪುರ, ಮೆನನ್ ಆಂಡ್ ಮೆನನ್ ಸೇರಿದಂತೆ ಒಟ್ಟು 50 ಕಂಪನಿಗಳು ಭಾಗವಹಿಸಲಿದ್ದಾವೆ ಎಂದರು.


ಉದ್ಯೋಗ ಮೇಳದಲ್ಲಿ ಯಾವುದೇ ರೀತಿಯ ಶುಲ್ಕವಿಲ್ಲ. ವಿದ್ಯಾರ್ಹತೆಗೆ ಅನುಗುಣವಾಗಿ ಈ ಮೇಳದಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಈಗಾಗಲೇ ಕಂಪನಿಗಳೊಂದಿಗೆ ಮಾತುಕತೆಯ ಪ್ರಕಾರ ಕೌಶಲ್ಯ ಹಾಗೂ ಕೌಶಲ್ಯ ರಹಿತ ವರ್ಗಗಳಿಗೂ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಉದ್ಯೋಗ ಮೇಳೆದಲ್ಲಿ 5ರಿಂದ 6 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡಿದ್ದು, ನಾಲ್ಕು ಸಾವಿರದಷ್ಟು ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಕೆಎಸ್‍ಆರ್‍ಟಿಸಿಯಲ್ಲಿ ಮೇಲ್ವಿಚಾರಕೇತರ ಹುದ್ದೆಗಳ ನೇಮಕಾತಿ

ಕೆಎಸ್‍ಆರ್‍ಟಿಸಿಯಲ್ಲಿ ಮೇಲ್ವಿಚಾರಕೇತರ ಹುದ್ದೆಗಳ ನೇಮಕಾತಿ
Friday, 23 Mar, 12.20 pm
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ವು ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ - 726
ಹುದ್ದೆಗಳ ವಿವರ
ತಾಂತ್ರಿಕ ಸಹಾಯಕ (ದರ್ಜೆ -3)
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಉತ್ತೀರ್ಣರಾದ ನಂತರ ಐಟಿಸಿ/ಐಟಿಐ/ಎನ್ ಎ ಸಿ ಶಿಕ್ಷಣವನ್ನು ಮೆಕ್ಯಾನಿಕ್ (ಮೋಟಾರು ವಾಹನ)/ಡಿಸೇಲ್ ಮೆಕ್ಯಾನಿಕ್ / ಆಟೋ ಎಲೆಕ್ಟ್ರೀಷಿಯನ್ / ವೆಲ್ಡರ್ / ಶೀಟ್ ಮೆಟಲ್ ವರ್ಕರ್ / ಎಲೆಕ್ಟ್ರಾನಿಕ್ ಮೆಕ್ಯಾನಿಕ್ / ಅಪೋಲ್‍ಸ್ಟ್ರಿ / ಡ್ರಾಪ್ಸ್ ಮ್ಯಾನ್ (ಮೆಕ್ಯಾನಿಕಲ್) / ಫಿಟ್ಟರ್ / ಮೆಷಿನಿಸ್ಟ್ / ಟೈರ್ ಫಿಟಿಂಗ್ / ವೆಲ್ಕನೈಸಿಂಗ್ / ಪೈಟಿಂಗ್ / ರೆಫ್ರಿಜರೇಷನ್ ಎಂಡ್ ಎರ್ ಕಂಡೀಷನಿಂಗ್ / ಟರ್ ನರ್ / ಆಟೋ ಮೊಬೈಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಫ್ಯಾಬ್ರಿಕೇಷನ್ (ಪಿಟ್ಟಿಂಗ್ ಎಂಡ್ ವೆಲ್ಡಿಂಗ್) ಕೋರ್ಸ ಪೂರೈಸಿರಬೇಕು.

ವಯೋಮಿತಿ : ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 35 ವರ್ಷ, 2ಎ/2ಬಿ/3ಎ/3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ/ ವರ್ಗ-1 ದವರಿಗೆ 40 ವರ್ಷದವರೆಗೆ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 800 ರೂ, ಪ.ಜಾ, ಪ.ಪಂ, ವರ್ಗ -1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 500 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-04-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ವಿಳಾಸ www.ksrtcjobs.com ಗೆ ಭೇಟಿ ನೀಡಿ.

ಕ್ಯಾಂಪಸ್‌ ಸಂದರ್ಶನ : ನಿಮ್ಮಿಂದ ಬಯಸುವುದೇನು?

ಕ್ಯಾಂಪಸ್‌ ಸಂದರ್ಶನ : ನಿಮ್ಮಿಂದ ಬಯಸುವುದೇನು?
  

ಉದ್ಯೋಗ ಮೇಳ, ಕ್ಯಾಂಪಸ್‌ ನೇಮಕಾತಿಯಲ್ಲಿ ಕಂಪೆನಿಗಳು ನಿಮ್ಮಿಂದ ಬಯಸುವುದು ಮಹತ್ವದ ಸಾಧನೆಯನ್ನಲ್ಲ; ಬದಲಾಗಿ ಅಂಥದೊಂದು ಸಾಧನೆಗೆ ಸಿದ್ಧಗೊಳ್ಳುತ್ತಿರುವ ನಿಮ್ಮ ಮನಸ್ಸನ್ನು ಮತ್ತು ಮನಃಸ್ಥಿತಿಯನ್ನು. ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಬಂಧಿಸಿಕೊಳ್ಳಬೇಡಿ, ಮುಕ್ತವಾಗಿ ಯೋಚಿಸಿ.

ಸುರಭಿ ಇತ್ತೀಚೆಗಷ್ಟೇ ಕ್ಯಾಂಪಸ್‌ ನೇಮಕಾತಿ (ರಿಕ್ರೂಟ್‌ಮೆಂಟ್‌)ಗೆ ಸಂಬಂಧಿಸಿದ ಸಂದರ್ಶನದಲ್ಲಿ ಭಾಗವಹಿಸಿದ್ದಳು. ಹೋಗುವಾಗ ಬಹಳ ಉತ್ಸಾಹದಿಂದಲೇ ಇದ್ದವಳು ಮನೆಗೆ ಬರುವಾಗ ಯಾಕೋ ಮಂಕಾಗಿದ್ದಳು. ಮನೆಯಲ್ಲಿ ಏನೆಂದು ಕಾರಣ ಕೇಳಿದರೆ, 'ಯಾಕೋ ಸರಿಯಾಗಿ ಮಾಡಲಿಲ್ಲ' ಎಂದಳು. ಅವಳಪ್ಪ ಮ್ಯಾನೇಜ್‌ ಮೆಂಟ್‌ ಹುದ್ದೆಯಲ್ಲಿದ್ದವರು. ಮಗಳ ಬೇಸರವನ್ನು ಕಂಡು ಧೈರ್ಯ ತುಂಬಿದರು. ಮುಂದಿನ ತಿಂಗಳು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮುನ್ನ ಮಗಳನ್ನು ಸಿದ್ಧಗೊಳಿಸಬೇಕೆಂದು ನಿರ್ಧರಿಸಿದರು. ಅದರಂತೆ ಎಲ್ಲವೂ ನಡೆದರೂ ಸುರಭಿ ಪಂದ್ಯದಲ್ಲಿ ಸೋತಳು.

ಅಪ್ಪನ ತರಬೇತಿ ನಡುವೆಯೂ ಸುರಭಿ ಏನು ತಪ್ಪು ಮಾಡಿದಳು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅವಳಿಗೂ ಸಹ. ಶೈಕ್ಷಣಿಕಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರಗಳನ್ನು ಕೊಟ್ಟಿದ್ದಳು. ಧನಾತ್ಮಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ಆಶಾವಾದಿಯಾಗಿಯೇ ಉತ್ತರಿಸಿದ್ದಳು. ಆದರೂ ಎಡವಿದ್ದೆಲ್ಲಿ? ಎಂಬುದಕ್ಕೆ ಉತ್ತರ ದೊರಕಿರಲಿಲ್ಲ.

ಕ್ಯಾಂಪಸ್‌ ನೇಮಕಾತಿ
ವಿದ್ಯಾರ್ಥಿಗಳು ಕೋರ್ಸ್‌ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಲವು ಕಾಲೇಜುಗಳು ತಮ್ಮಲ್ಲೇ ಪ್ರತಿಷ್ಠಿತ ಕಂಪೆನಿಗಳನ್ನು ಕರೆದು ಕ್ಯಾಂಪಸ್‌ ಸಂದರ್ಶನಕ್ಕೆ ಅಣಿಗೊಳಿಸುತ್ತವೆ. ಅದೇ ಈಗ ಉದ್ಯೋಗ ಮೇಳದ ರೂಪವೂ ಪಡೆಯುತ್ತಿದೆ. ಪ್ರತಿಷ್ಠಿತ ಕಂಪೆನಿಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಂದರ್ಶಿಸಿ ಸೂಕ್ತವೆನಿಸಿದವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತವೆ. ಇಡೀ ಪ್ರಕ್ರಿಯೆಯಲ್ಲಿ ಗಮನಿಸುವುದು ಬರೀ ಶೈಕ್ಷಣಿಕ ಸಾಧನೆಯನ್ನಲ್ಲ; ಇನ್ನೂ ಹಲವಾರು ಸಂಗತಿಗಳು.

ಕಂಪೆನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿಯೊಬ್ಬರು, ಸಾಮಾನ್ಯವಾಗಿ ಈಗತಾನೇ ಕೋರ್ಸ್‌ ಮುಗಿಸಿ ಬರುವ ವಿದ್ಯಾರ್ಥಿಯಿಂದ ಏನನ್ನು ಬಯಸುತ್ತೀರಿ? ಎಂದು ಕೇಳಿದ ಪ್ರಶ್ನೆಗೆ, 'ನಮಗೆ ಅವರ ಶೈಕ್ಷಣಿಕ ಸಾಧನೆಯಷ್ಟೆ ಮುಖ್ಯವಲ್ಲ. ಯಾಕೆಂದರೆ, ಹಿಂದಿನ ಶೈಕ್ಷಣಿಕ ಸಾಧನೆಯನ್ನಷ್ಟೇ ಲೆಕ್ಕ ಹಾಕಿ ಭವಿಷ್ಯವನ್ನು ಗ್ರಹಿಸಲಾಗದು' ಎಂದರು.

'ನಮಗೆ ಅವರ ದೃಷ್ಟಿಕೋನ, ಹೊಸತಿಗೆ ತೆರೆದುಕೊಳ್ಳುವ ಮನೋಭಾವ ಮತ್ತು ಪರಿಶ್ರಮದ ಮೇಲೆ ಇರಬಹುದಾದ ನಂಬಿಕೆ' ಒಂದು ಹಂತದಲ್ಲಿ ಮುಖ್ಯವೆನಿಸುತ್ತವೆ. ಮತ್ತೂಂದು ಹಂತದಲ್ಲಿ ಒಂದು ತಂಡದೊಳಗೆ ಸೇರಿ ಯಾವ ರೀತಿಯಲ್ಲಿ ಕೆಲಸ ಮಾಡಬಹುದೆಂಬುದೂ ಬಹಳ ಮುಖ್ಯ. ಇದನ್ನು ಆಧರಿಸಿಯೇ ನಮ್ಮ ಸಂದರ್ಶನ ಮತ್ತು ನೇಮಕಾತಿ ನಡೆಯುತ್ತದೆ ಎನ್ನುತ್ತಾರೆ ಅವರು.

ಹಾಗೆಂದರೇನು?
ಕಂಪೆನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಸಾಮಾನ್ಯವಾಗಿ ಕೇಳುವಂಥ ಪ್ರಶ್ನೆಗಳು ವಾಸ್ತವವಾಗಿ ಸಾಮಾನ್ಯವಾಗಿರುವುದಿಲ್ಲ. ನಾವು ಹಾಗೆ ಅಂದುಕೊಳ್ಳುತ್ತೇವಷ್ಟೇ. ಆ ಸಾಮಾನ್ಯ ಪ್ರಶ್ನೆಗಳ ಮೂಲಕ ನಿಮ್ಮ ಮನೋಭಾವವನ್ನು ಅಳೆಯುತ್ತಿರುತ್ತಾರೆ. ಉದಾಹರಣೆಗೆ ಸಂದರ್ಶನಕಾರರೊಬ್ಬರು, 'ನಿಮ್ಮ ಅತ್ಯಂತ ಆಪ್ತ ಗೆಳೆಯನ ಹೆಸರು ಹೇಳಿ. ಅವನಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಒಳ್ಳೆಯ ಗುಣಗಳ ಬಗ್ಗೆ ಕೇಳುತ್ತೇನೆ' ಎನ್ನುತ್ತಾರೆ. ತತ್‌ಕ್ಷಣ ವಿದ್ಯಾರ್ಥಿ (ಸಂದರ್ಶನಾರ್ಥಿ), 'ಅಂಥ ಗೆಳೆಯರು ನನಗಿಲ್ಲ ಎಂದಾಗಲೀ ನಾನು ಮೂಲತಃ ಇನ್ನೊಬ್ಬರ ತಂಟೆಗೆ ಹೋಗುವವನಲ್ಲ' ಎಂದು ವಿನಯದ ಉತ್ತರ ಕೊಡುತ್ತಾರೆ. ನಿಮ್ಮ ಉತ್ತರವನ್ನು ಸಂದರ್ಶನಕಾರರು ಹೇಗೆ ವಿಶ್ಲೇಷಿಸುತ್ತಾರೆಂದರೆ, 'ನೀವೊಬ್ಬರು ಸಂಘಜೀವಿಯಲ್ಲ; ತಂಡದೊಳಗೆ ಕೆಲಸ ಮಾಡಲು ಕಷ್ಟ. ವೈಯಕ್ತಿಕವಾಗಿ ನಿಮ್ಮಷ್ಟಕ್ಕೆ ನೀವು ಕೆಲಸ ಮಾಡಬಲ್ಲಿರಿ. ಬಹಳ ಅತ್ಯುತ್ತಮವಾಗಿಯೇ ಸಾಧನೆ ಮಾಡಬಲ್ಲಿರಿ. ಆದರೆ ತಂಡದ ಇತರ ಸದಸ್ಯರೊಂದಿಗೆ ಬೆರೆತು ಕೆಲಸ ಮಾಡಲಾರಿರಿ' ಎಂಬುದು.

ಮತ್ತೂಂದು ಇಂಥದ್ದೇ ಪ್ರಶ್ನೆ. 'ನಿಮ್ಮ ಹವ್ಯಾಸಗಳೇನು?' ಎಂದು ಕೇಳಿದಾಗ ಬಹಳಷ್ಟು ಮಂದಿ, 'ನನಗೆ ಬಿಡುವು ಇದ್ದಾಗಲೆಲ್ಲ ಚೆಸ್‌ ಆಡುತ್ತೇನೆ. ಬ್ಯಾಡ್ಮಿಂಟನ್‌ ಬಹಳ ಇಷ್ಟ' ಎನ್ನುತ್ತಾರೆ. ಅದೂ ಸಹ ನಿಮ್ಮ ವೈಯಕ್ತಿಕ ನೆಲೆಯನ್ನಷ್ಟೆ ಹೇಳುತ್ತದೆ. ತಂಡದ ಸದಸ್ಯನಾಗಿಯಲ್ಲ. ಇಲ್ಲೂ ಚೆಸ್‌ ಬುದ್ಧಿವಂತರ ಆಟವಿರಬಹುದು; ಆದರೆ ತಂಡ ಸ್ಫೂರ್ತಿಯ ಆಟವಲ್ಲ. ಕ್ರಿಕೆಟ್‌, ಫ‌ುಟ್‌ಬಾಲ್‌ ಹಾಗಲ್ಲ. ಎಲ್ಲರೂ ಸೇರಿ ಒಂದು ಗೆಲುವಿಗೆ ಶ್ರಮಿಸುತ್ತಾರೆ.

ಹಾಗಾದರೆ ಕಂಪೆನಿಗಳು ಏನನ್ನು ಬಯಸುತ್ತವೆ?
ಕಂಪೆನಿಗಳು ಸದಾ ನೋಡುವುದು ಈ ಕ್ಷಣದ ಅಗತ್ಯವನ್ನಲ್ಲ. ಭವಿಷ್ಯದ ಆಶೋತ್ತರಗಳನ್ನು ಈಡೇರಿಸಲು ಅವರಿಗೆ ಶಕ್ತರು ಬೇಕು. ಹಾಗಾಗಿ, ಕ್ಯಾಂಪಸ್‌ ನೇಮಕಾತಿ, ಉದ್ಯೋಗ ಮೇಳದಲ್ಲಿ ಮೊಳಕೆಯೊಡೆದು, ಟಿಸಿಲಾಗಿ ಬೆಳೆಯಬಲ್ಲರೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಾರೆ. ನಿಮ್ಮ ಹೊಸತಿಗೆ ತೆರೆದುಕೊಳ್ಳುವ ಗುಣ, ಬದಲಾವಣೆಯನ್ನು ಸ್ವೀಕರಿಸುವ ಮನೋಭಾವ, ಪರಿಸ್ಥಿತಿಯನ್ನು ಒಪ್ಪಿಕೊಂಡು ಅದಕ್ಕೆ ಪರಿಹಾರ ಕಂಡುಹಿಡಿಯುವ ಉತ್ಸಾಹ-ಇವೆಲ್ಲವೂ ಬಹಳ ಮುಖ್ಯವಾಗಿ ಪರಿಗಣಿಸಲ್ಪಡುವಂಥವು.

ಹಾಗಾಗಿಯೇ ಇಂಥ ಸಂದರ್ಭಗಳಲ್ಲಿ ನಮ್ಮನ್ನು ನಾವು ವೈಯಕ್ತಿಕ ಸಾಧಕನೆಂದು ಬಿಂಬಿಸಿಕೊಳ್ಳುವುದಕ್ಕಿಂತ ಎಲ್ಲರೊಂದಿಗೆ ಕೂಡಿಕೊಂಡು ಕೆಲಸ ಮಾಡಬಲ್ಲ ಒಬ್ಬ ಸಮರ್ಥನೆಂದು ಬಿಂಬಿಸಿಕೊಂಡರೆ ಹೆಚ್ಚು ಲಾಭ. ಅದಕ್ಕೇ ಕವಿ ಡಿ.ವಿ. ಗುಂಡಪ್ಪನವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ, 'ಎಲ್ಲರೊಳು ಒಂದಾಗು ಮಂಕುತಿಮ್ಮ' ಎಂದದ್ದು. ಇದೇ ಇಂದಿನ ಮ್ಯಾನೇಜ್‌ಮೆಂಟ್‌ ಸಿದ್ಧಾಂತದ ಪರಮ ತತ್ವ. ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ನಮ್ಮನ್ನು ನಾವು ಬಂಧಿಸಿಕೊಂಡು ಬಿಟ್ಟರೆ, ನಮ್ಮೊಳಗೆ ಇರಬಹುದಾದ ಅಪರಿಮಿತ ಸಾಧ್ಯತೆಯೂ ಕ್ಷೀಣಿಸಬಹುದು. ಅದಕ್ಕೇ ಸ್ವಾಮಿ ವಿವೇಕಾನಂದರು ಹೇಳಿದಂತೆ, 'ನೀವು ಅಸಾಮಾನ್ಯರು, ಸಾಮಾನ್ಯರೆಂದುಕೊಳ್ಳಬೇಡಿ'.

ಯಾವುದಕ್ಕೂ ಆಗದು ಎನ್ನಬೇಡಿ
ಇವೆಲ್ಲವೂ ಒಂದು ದಿನದಲ್ಲಿ ಆಗುವುದೇ ಎಂಬುದು ಪ್ರಶ್ನೆ. ಅದಕ್ಕೆ ಉತ್ತರವಾಗಿಯೇ ಈ ಲೇಖನ. ಪದವಿಗೆ ಸೇರಿದ್ದೀರೆನ್ನಿ ಅಥವಾ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದುಕೊಂಡಿರೆನ್ನಿ. ಆ ಮೊದಲ ದಿನದಿಂದಲೇ ನಿಮ್ಮಲ್ಲಿರುವ ಗುಣಾವಗುಣಗಳನ್ನು ಅಭ್ಯಾಸ ಮಾಡಿ ಕೊಳ್ಳಬೇಕು. ಒಂದು ತಂಡದೊಳಗೆ ಸೇರಿ ಕೆಲಸ ಮಾಡ ಬಲ್ಲಂಥ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಬಗ್ಗೆ, ಆಶಾ ವಾದಿ ಮನೋಭಾವವನ್ನು ಬೆಳೆಸಿಕೊಳ್ಳುವ ಬಗ್ಗೆ, ಫ‌ಲಿತಾಂಶಗಳನ್ನು ತೂಗಿ ಅಳೆಯುತ್ತಾ ಕುಳಿತುಕೊಳ್ಳದೇ ಪ್ರಯತ್ನಗಳಿಗೆ ಮುಂದಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇದು ಸಣ್ಣವರಿರುವಾಗಲೇ ಆರಂಭಿಸಿದರೆ ಒಳಿತು. ಒಂದು ವೇಳೆ ಸಾಧ್ಯವಾಗಲಿಲ್ಲವೆನ್ನಿ. ಪಿಯುಸಿಯಲ್ಲಿ  ನಿಮ್ಮನ್ನು ನೀವು ತಿದ್ದಿಕೊಳ್ಳಿ. ವಿಶಾಲ ಜಗತ್ತಿಗೆ ಹೋಗುವುದಕ್ಕೆ ಹೇಗೆ ಪೂರಕವೂ ಹಾಗೆ ತಿದ್ದಿತೀಡಿಕೊಳ್ಳಿ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅವೆಲ್ಲದಕ್ಕೂ ಅಂತಿಮ ಸ್ಪರ್ಶ ಕೊಡುತ್ತಾ ಹೋಗಿ. ಈ ಪ್ರಯತ್ನಗಳೆಲ್ಲವೂ ನಿಮ್ಮನ್ನು ಒಬ್ಬ ಆತ್ಮವಿಶ್ವಾಸವುಳ್ಳ ಸಮರ್ಥ ಸಂಪನ್ಮೂಲ ವ್ಯಕ್ತಿಯಂತೆ ಬಿಂಬಿಸಬಲ್ಲದು.

ಯಾವುದೇ ಸ್ಪರ್ಧೆ ಇದ್ದರೂ ಅದಕ್ಕೆ ಇಲ್ಲ ಎನ್ನಬೇಡಿ. ಎಲ್ಲ ಚಟುವಟಿಕೆಯ ಭಾಗವಾಗಿ. ತಂಡ ಸ್ಫೂರ್ತಿ ತುಂಬುವ ಕ್ರೀಡೆ, ಚಟುವಟಿಕೆಗಳಿಗೆ ಮೊದಲು ಹೆಸರು ನೋಂದಾಯಿಸಿಕೊಳ್ಳಿ. ಸೃಜನಶೀಲ ಚಟುವಟಿಕೆಗಳಿಗೆ ಸದಾ ಮುಂದಿರಿ. ಪ್ರತಿ ಪ್ರಯತ್ನದಲ್ಲೂ ಕಲಿಕೆಯನ್ನು ಹುಡುಕಿಕೊಳ್ಳಿ. ಅನುಭವ ದೊಡ್ಡದು. ಅದಕ್ಕಾಗಿ ಅವಕಾಶಗಳನ್ನು ತಪ್ಪಿಸಿಕೊಳ್ಳಬೇಡಿ. ವ್ಯಕ್ತಿಗಳನ್ನು ಮುಖಾ ಮುಖೀಯಾಗುವ ಅವಕಾಶಗಳಿಗೆ ಸದಾ ಸಿದ್ಧರಿರಿ. ನಮ್ಮನ್ನು ಒಬ್ಬ ವ್ಯಕ್ತಿಯನ್ನಾಗಿ ಶಿಕ್ಷಣ ರೂಪಿಸಬಹುದು; ಆದರೆ ಶಕ್ತಿಯನ್ನಾಗಿ ರೂಪಿಸುವುದು ಸಮಾಜ.

- ರಘೋತ್ತಮ, ಪುತ್ತೂರು

ಸೇನೆ ಸೇರಲು ಬಯಸುವ ಯುವಕರಿಗೆ ಸುವರ್ಣಾವಕಾಶ

*ಸೇನೆ ಸೇರಲು ಬಯಸುವ ಯುವಕರಿಗೆ ಸುವರ್ಣಾವಕಾಶ*

*ಮಂಗಳೂರು:* ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮಾರ್ಚ್‌ 12ರಿಂದ ಎಪ್ರಿಲ್ 25ರೊಳಗೆ www.indianarmy.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

*ಮೇ 12ರಿಂದ ರ‍್ಯಾಲಿ ಆರಂಭ:*

ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯ ಕಚೇರಿ ಆಯೋಜಿಸಿರುವ ಸೇನಾ ನೇಮಕಾತಿ ರ‍್ಯಾಲಿಯು ಇಲ್ಲಿನ ಸೈನಿಕ ಶಾಲೆಯಲ್ಲಿ ಮೇ-12 ರಿಂದ 18ರವರೆಗೆ ನಡೆಯಲಿದೆ. ದಕ್ಷಿಣ ಕನ್ನಡದಿಂದ ಕೂಡ ಹೆಚ್ಚಿನ ಯುವಕರು ಪಾಲ್ಗೊಳ್ಳಬೇಕು. ಕೂಳೂರಿನಲ್ಲಿ ಸೈನಿಕ ಶಾಲೆ ಇದ್ದು, ಇಲ್ಲಿ ಅಗತ್ಯ ಮಾಹಿತಿ ದೊರೆಯಲಿದೆ. ಈ ಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೋಂದೆಲ್‌ನಲ್ಲಿ ಲಿಖಿತ ಪರೀಕ್ಷೆ ಆಯೋಜಿಸಲಾಗುವುದು ಎಂದು ಭಾರತೀಯ ಸೇನಾ ನೇಮಕಾತಿಯ ಕರ್ನಾಟಕ ರಾಜ್ಯ ಅಧಿಕಾರಿ ಪ್ರಶಾಂತ್ ಪೇಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ರ‍್ಯಾಲಿಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕ ಮೇ 1ರ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿಪಡಿಸಿದ ಅಂಕದೊಂದಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತೇರ್ಗಡೆಯಾದ ಅಭ್ಯರ್ಥಿಗಳು ಭಾಗವಹಿಸಲು ಅರ್ಹರು ಎಂದು ತಿಳಿಸಿದರು.

*ಹುದ್ದೆಗಳ ವಿವರ:*

ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದ.ಕ., ಉಡುಪಿ ಸೇರಿದಂತೆ ರಾಜ್ಯದ 11 ಜಿಲ್ಲಾ ಸೈನಿಕ ಶಾಲೆಗಳ ಮೂಲಕ ನೇಮಕಾತಿ ನಡೆಯುತ್ತಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್(ಕ್ಲರ್ಕ್‌, ಸ್ಟೋರ್ ಕೀಪರ್) ಸೋಲ್ಜರ್ ಕುಶಲಕರ್ಮಿ, ಸೋಲ್ಜರ್ ತಾಂತ್ರಿಕ ಮತ್ತು ಸೋಲ್ಜರ್‌ ನರ್ಸಿಂಗ್‌ ಸಹಾಯಕ ಹೀಗೆ ವಿವಿಧ ಹುದ್ದೆಗಳು ಇರಲಿವೆ ಎಂದು ವಿವರಿಸಿದರು.

*ಹುದ್ದೆ ಮತ್ತು ವಿದ್ಯಾರ್ಹತೆ ವಿವರ*

ಸಿಪಾಯಿ ಜಿ. ಡಿ. ಹುದ್ದೆಗೆ - ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿರವೇಕು. ಶೇ.45 ಅಂಕಗಳೊಂದಿಗೆ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕ ಪಡೆದಿರಬೇಕು.
ಹದಿನೇಳುವರೆಯಿಂದ 21 ವಯಸ್ಸಿನೊಳಗಿರಬೇಕು. ಸಿಪಾಯಿ ಕ್ಲರ್ಕ್‌, ಎಸ್ಕೆಟಿ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಅವಶ್ಯವಿದ್ದು ಶೇ.50 ಅಂಕಗಳನ್ನು ಪಡಿದಿರಬೇಕು. ಹದಿನೇಳುವರೆಯಿಂದ 23 ವಯಸ್ಸಿನೊಳಗಿರಬೇಕು. ಸಿಪಾಯಿ ಟೆಕ್ನಿಕಲ್ ಮತ್ತು ಸಿಪಾಯಿ ನರ್ಸಿಂಗ್‌ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ತೇರ್ಗಡೆಯಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು. ಸಿಪಾಯಿ ಟ್ರೇಡ್ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು ಎಂದು ವಿವರಿಸಿದರು.

*ದೈಹಿಕ ಪರೀಕ್ಷೆ:*

ಆರಂಭದಲ್ಲಿ ಶಾರೀರಿಕ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಯು 5ನಿಮಿಷ 30 ಸೆಕೆಂಡಿನಲ್ಲಿ 1.6ಕಿಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರಬೇಕು. 166 ಸೆಂಟಿಮೀಟರ್ ಎತ್ತರ, ಕನಿಷ್ಠ 50 ಕೆಜಿ ತೂಕ ಇತ್ಯಾದಿ ಅರ್ಹತೆಯೂ ಅವಶ್ಯ. ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿ ಲಿಖಿತ ಪರೀಕ್ಷೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಶಾಂತ್ ವಿವರಿಸಿದರು.

ರೈಲ್ವೇ ನೇಮಕಾತಿ 2018 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೇ ನೇಮಕಾತಿ 2018... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Published:Tuesday, March 20, 2018, 13:15 [IST]
ಭಾರತೀಯ ರೈಲ್ವೇ ನೇಮಕಾತಿಯು ವಿವಿಧ ಇದೀಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಶಾನ್ಯ ಫ್ರಾಂಟಿಯರ್, ಮಹಾರಾಷ್ಟ್ರ ಮೆಟ್ರೋ ರೈಲು ಮತ್ತು ಲಕ್ನೋ ಮೆಟ್ರೋ ರೈಲುಗಳಲ್ಲಿ ಹುದ್ದೆ ಖಾಲಿ ಇದ್ದು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.


ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಸಂಬಂಧಪಟ್ಟಂತೆ ಆರ್‌ಐಟಿಇಎಸ್ ಲಿಮಿಟೆಡ್ ನೇಮಕಾತಿ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ
ಹುದ್ದೆ ಹೆಸರು ಡೆಪ್ಯುಟಿ ಜನರಲ್ ಮ್ಯಾನೇಜರ್
ವಿದ್ಯಾರ್ಹತೆ ಸ್ನಾತಕೋತ್ತರ ಪದವಿ
ಗರಿಷ್ಟ ವಯಸ್ಸು 39 ವರ್ಷ
ವೇತನ 70000 ದಿಂದ 200000 ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್ 14,2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 11,2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಇಂಜಿನಿಯರ್ಸ್ ಹುದ್ದೆಗೆ ಸಂಬಂಧಪಟ್ಟಂತೆ ಆರ್‌ಐಟಿಇಎಸ್ ಲಿಮಿಟೆಡ್ ನೇಮಕಾತಿ ವಿವರ
ಹುದ್ದೆ ಹೆಸರು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್
ವಿದ್ಯಾರ್ಹತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದಿರಬೇಕು
ವಯೋಮಿತಿ 53 ವರ್ಷ
ವೇತನ 100000ರೂ. ರಿಂದ 250000 ರೂ ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್7, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 2, 2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ


ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ
ಹುದ್ದೆ ಹೆಸರು ಮೆಡಿಕಲ್ ಪ್ರಾಕ್ಟಿಶನರ್
ವಿದ್ಯಾರ್ಹತೆ ಜನರಲ್ ಡ್ಯುಟಿಗೆ ಎಂಬಿಬಿಎಸ್ ಹಾಗೂ ಸ್ಪೇಶಾಲಿಸ್ಟ್ ಗೆ ಪಿಜಿಡಿಎಂ ಮಾಡಿರಬೇಕು
ಗರಿಷ್ಟ ವಯಸ್ಸು 65 ವರ್ಷ
ವೇತನ  75000 ದಿಂದ 105000 ರೂ ವರೆಗೆ
ಸಂದರ್ಶನ ಎಪ್ರಿಲ್ 17, 2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರ ಮೆಟ್ರೋ ರೈಲು ನೇಮಕಾತಿ ೨೦೧೮
ಹುದ್ದೆ ಹೆಸರು ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್, ಅಕೌಂಟ್ ಅಸಿಸ್ಟೆಂಟ್ ಮತ್ತು ಆಫೀಸ್ ಅಸಿಸ್ಟೆಂಟ್
ವಿದ್ಯಾರ್ಹತೆ ಸಿಎ, ಕಾಮರ್ಸ್ ಆಂಡ್ ಎಂಬಿಎ ಪದವಿ
ಗರಿಷ್ಟ ವಯಸ್ಸು 45 ವರ್ಷ 
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಮಾರ್ಚ್7, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ್ 27,2018
ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಲಖನೌ ಮೆಟ್ರೋ ರೈಲು ನೇಮಕಾತಿ 2018
ಹುದ್ದೆ ಹೆಸರು ಎಕ್ಸ್‌ಕ್ಯುಟೀವ್ ಹಾಗೂ ನಾನ್ ಎಕ್ಸ್‌ಕ್ಯುಟೀವ್
ವಿದ್ಯಾರ್ಹತೆ ಬಿಇ, ಬಿಟೆಕ್ ಅಥವಾ ಎಂಬಿಎ
ವಯೋಮಿತಿ 21 ರಿಂದ28 ವರ್ಷ
ವೇತನ 13500 ರೂ ರಿಂದ 25250 ರೂ ವರೆಗೆ
ಅರ್ಜಿ ಸಲ್ಲಿಕೆಗೆ ಪ್ರಾರಂಭವಾದ ದಿನಾಂಕ ಫೆಬ್ರವರಿ 26, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮಾರ್ಚ 27, 2018


ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

Published:Thursday, March 22, 2018, 12:30 [IST]
ದಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಇಂಡಿಯನ್ ಎಕಾನಾಮಿ ಸರ್ವೀಸ್, ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಹಾಗೂ ಭೂಗೋಳ ಶಾಸ್ತ್ರ ಇಲಾಖೆ ಅಡಿಯಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಎಪ್ರಿಲ್ 16, 2018 ಕೊನೆಯ ದಿನಾಂಕ


ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ 2018 ಹುದ್ದೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ
ವರ್ಗ ಡೀಟೆಲ್ಸ್
ಇಲಾಖೆ ಇಂಡಿಯನ್ ಎಕಾನಾಮಿ ಸರ್ವೀಸ್, ಇಂಡಿಯನ್ ಸ್ಟಾಟಿಸ್ಟಿಕಲ್ ಸರ್ವೀಸ್ ಹಾಗೂ ಭೂಗೋಳ ಶಾಸ್ತ್ರ ಇಲಾಖೆ
ಸಂಸ್ಥೆ ಕೇಂದ್ರ ಲೋಕ ಸೇವಾ ಆಯೋಗ
ವಿದ್ಯಾರ್ಹತೆ ಐಇಎಸ್ : ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಐಎಸ್ಎಸ್: ಮ್ಯಾಥಮ್ಯಾಟಿಕ್ಸ್ ವಿಷಯದಲ್ಲಿ ಪದವಿ
ಭೂಗೋಳ ಶಾಸ್ತ್ ಇಲಾಖೆ: ಭೂಗೋಳ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರಬೇಕು
ವಯೋಮಿತಿ  21 ರಿಂದ 30 ವರ್ಷ
ಸ್ಥಳ ಭಾರತ
ಇಂಡಸ್ಟ್ರಿ ಸಿವಿಲ್ ಸರ್ವೀಸ್
ಅರ್ಜಿ ಸಲ್ಲಿಕೆ ಪ್ರಾರಂಭ ಮಾರ್ಚ್ 21, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 16, 2018
ಅರ್ಜಿ ಸಲ್ಲಿಸುವುದು ಹೇಗೆ?
ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ ಅರ್ಜಿ ಸಲ್ಲಿಕೆಗೆ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1
ಆಫೀಶಿಯಲ್ ಪೇಜ್ ಗೆ ಲಾಗ್ ಇನ್ ಆಗಿ
  

ಸ್ಟೆಪ್ 2
ನೋಟಿಫಿಕೇಶನ್ ಅಲ್ಲಿರುವ Whats New ಟ್ಯಾಬ್ ಕ್ಲಿಕ್ ಮಾಡಿ

  

ಸ್ಟೆಪ್ 3
ಕಾಂಪಿಟೇಟಿವ್ ಎಕ್ಸಾಂ ಪಿಡಿಎಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  

ಸ್ಟೆಪ್ 4
ಸ್ಕ್ರೀನ್ ಮೇಲೆ ಹುದ್ದೆಯ ಕಂಪ್ಲೀಟ್ ಮಾಹಿತಿಯ ನೋಟಿಫಿಕೇಶನ್ ಮೂಡುತ್ತದೆ. ಇದನ್ನ ಗಮನವಿಟ್ಟು ಓದಿ
  

ಸ್ಟೆಪ್ 5
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಗಮನವಿಟ್ಟು ಓದಿಕೊಳ್ಳಿ
  

ಸ್ಟೆಪ್ 6
ಪರೀಕ್ಷೆ ಲಿಂಕ್ ಮೇಲೆ ಕ್ಲಿಕ್ ಮಾಡಿ
  

ಸ್ಟೆಪ್ 7
ಅರ್ಜಿಯ ಲಿಂಕ್ ಗಳ ಪಟ್ಟಿ ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ
  

ಸ್ಟೆಪ್ 8
ನಿಮ್ಮ ಆಯ್ಕೆಯಂತೆ ಪಾರ್ಟ್ 1 ರಿಜಿಸ್ಟ್ರೆಶನ್ ಲಿಂಕ್ ಕ್ಲಿಕ್ ಮಾಡಿ
  

ಸ್ಟೆಪ್ 9
ಅರ್ಜಿ ಭರ್ತಿ ಮಾಡುವ ಮುನ್ನ ಮಾಹಿತಿಯ ಪಟ್ಟಿಯು ತೆರೆದುಕೊಳ್ಳುತ್ತದೆ. ಅದನ್ನು ಗಮನವಿಟ್ಟು ಓದಿಕೊಳ್ಳಿ
  

ಸ್ಟೆಪ್ 10
ಪೂರ್ತಿಯಾಗಿ ಓದಿದ ಬಳಿಕ ಕಂಡೀಶನ್ ಗೆ ಒಪ್ಪಿಗೆ ಇದೆ ಎಂದು Yes ಬಟನ್ ಕ್ಲಿಕ್ ಮಾಡಿ
  

ಸ್ಟೆಪ್ 11
ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಪ್ರತಿಯೊಂದು ಅಂಕಣವನ್ನ ಕೂಡಾ ಭರ್ತಿ ಮಾಡಿ
  

ಸ್ಟೆಪ್ 12
ಅರ್ಜಿಯ ಮುಂದಿನ ಪೇಜ್‌ಗೆ Continue ಬಟನ್ ಕ್ಲಿಕ್ ಮಾಡಿ


ONGC ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ONGC ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Published:Thursday, March 22, 2018,
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಇ1 ಕೆಟಗಿರಿಯ ಎಕ್ಸಿಕ್ಯುಟೀವ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 27, 2018.

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ
ವರ್ಗ ಡೀಟೆಲ್ಸ್
ಹುದ್ದೆ ಹೆಸರು ಮಾನವ ಸಂಪನ್ಮೂಲ ಕಾರ್ಯಕಾರಿಣಿ; ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ; ಅಧಿಕೃತ ಭಾಷಾ ಅಧಿಕಾರಿ
ಸಂಸ್ಥೆ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್
ವಿದ್ಯಾರ್ಹತೆ ಮಾನವ ಸಂಪನ್ಮೂಲ ಕಾರ್ಯಕಾರಿಣಿ,ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ ಫೀಲ್ಡ್ ಗೆ ಸಂಬಂಧಪಟ್ಟಂತೆ ಎಂಬಿಎ ಪದವಿ ಪಡೆದಿರಬೇಕು
ವಯೋಮಿತಿ 30 ವರ್ಷ
ವೇತನ 180000
ಸ್ಥಳ ಭಾರತ
ಇಂಡಸ್ಟ್ರಿ ಮ್ಯಾನೇಜ್‌ ಮೆಂಟ್
ಅರ್ಜಿ ಸಲ್ಲಿಕೆಗೆ ಪ್ರಾರಂಭ ಎಪ್ರಿಲ್ 6, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಪ್ರಿಲ್ 27, 2018
ಅರ್ಜಿ ಸಲ್ಲಿಸುವುದು ಹೇಗೆ?
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಗೆ ಸಂಬಂಧಪಟ್ಟಂತೆ ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನವನ್ನ ಫಾಲೋ ಮಾಡಿ

ಸ್ಟೆಪ್1
ಆಫೀಶಿಯಲ್ ಪೇಜ್‌ ಗೆ ಲಾಗಿನ್ ಆಗಿ

  

ಸ್ಟೆಪ್ 2
Careers ಟ್ಯಾಬ್ ಕ್ಲಿಕ್ ಮಾಡಿ

  

ಸ್ಟೆಪ್ 3
ಸ್ಕ್ರೀನ್ ಮೇಲೆ ಕೆರಿಯರ್ ಪೇಜ್ ತೆರೆದುಕೊಳ್ಳುತ್ತದೆ
  

ಸ್ಟೆಪ್ 4
ಸ್ಕ್ರೋಲ್ ಡೌನ್ ಮಾಡಿ.ಪೇಜ್ ನ ಕೊನೆಯ ಭಾಗದಲ್ಲಿರುವ Recruitment of Executives at E1 level in ONGC through University Grants Commission-National Eligibility Test (NET) - July 2018 ಕ್ಲಿಕ್ ಮಾಡಿ
  

ಸ್ಟೆಪ್ 5
ಸ್ಕ್ರೀನ್ ಮೇಲೆ ವಿವಿಧ ಹುದ್ದೆಗಳ ಲಿಸ್ಟ್‌ ತೆರೆದುಕೊಳ್ಳುತ್ತದೆ
  

ಸ್ಟೆಪ್ 6
ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ
  

ಸ್ಟೆಪ್ 7
ರಿಕ್ರ್ಯುಟ್ ಮೆಂಟ್ ಪೇಜ್ ಗೆ ಹಿಂತಿರುಗಿ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಎಪ್ರಿಲ್ 6ರಿಂದ ಪ್ರಾರಂಭವಾಗುತ್ತದೆ