Thursday 28 June 2018

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದಲ್ಲಿ ಉದ್ಯೋಗ

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (Airports Authority of India)ದಲ್ಲಿ1.  Jr. Assistant (Fire Services) ಹಾಗೂ
2.  Sr. Assistant (Electronics) ಹುದ್ದೆಗಳಿಗೆ Online ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಹತೆ:
1. Jr. Asst. (FS) -- i) ಪಿ. ಯು. ಸಿ. ಅಥವಾ ಆಟೋಮೊಬಾಯಿಲ್/ಮೆಕ್ಯಾನಿಕಲ್ ಅಥವಾ ಫ಼ಯರ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ (ಅಂಗೀಕೃತ -3 ವರ್ಷದ ಕೋರ್ಸ್) - ಕನಿಷ್ಟ 50% ಅಂಕಗಳೊಂದಿಗೆ.  ii) ವಾಹನ ಚಾಲನಾ ಲೈಸನ್ಸ್ (ಲಘು - 2 ವರ್ಷ, ಮಧ್ಯಮ - 1 ವರ್ಷ ಅಥವಾ ಭಾರೀ ( Heavy)- ಹೊಸತೂ ಅಗುತ್ತದೆ). iii) ದೈಹಿಕ ಕ್ಷಮತೆ (ನೋಟಿಸಿನಲ್ಲಿ ವಿವರಗಳಿವೆ).

ಲಿಖಿತ ಪರೀಕ್ಷೆ, ದೈಹಿಕ ಕ್ಷಮತಾ ಪರೀಕ್ಷೆ , ವಾಹನ ಚಾಲನೆಯ ಪರಿಣತಿಯ ಪರೀಕ್ಷೆ  ಹಾಗೂ ಸಂದರ್ಶನಗಳ ಮುಖಾಂತರ ನೇಮಕಾತಿ ಪ್ರಕ್ರಿಯ ಜರಗುತ್ತದೆ.

2. Sr. Asst. (Electronics)- i)ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯೂನಿಕೇಶನ್ ಅಥವಾ ರೇಡಿಯೋ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ.
ii) ಅದೇ ಕ್ಷೇತ್ರದಲ್ಲಿ  ಎರಡು ವರ್ಷಗಳ ಅನುಭವ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳ ಮುಖಾಂತರ ನೇಮಕಾತಿ ಪ್ರಕ್ರಿಯ ಜರಗುತ್ತದೆ.

ಎರಡೂ ಹುದ್ದೆಗಳಿಗೆ ಆಕರ್ಷಕ ವೇತನವಿದೆ. ವೇತನವು ಪರಿಷ್ಕರಣೆಯ ಹಂತದಲ್ಲಿದ್ದು ಒಟ್ಟು ಸಂಬಳ ಮಾಸಿಕ ರೂ. 50000 ದಿಂದ 60000ದ ವರೆಗೆ ಸಿಗುವುದು.
ಕನ್ನಡ ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ಯಾವುದೇ ಪ್ರಕಟಣೆ ಲಭ್ಯವಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಇದನ್ನು ಪ್ರಕಟಿಸುತ್ತಿದ್ದೇವೆ. ಹೆಚ್ಚಿನ ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನು ತಲುಪುವುದು ನಮ್ಮ ಉದ್ದೇಶ. ಈ ಬಗ್ಗೆ ಪ್ರಾಧಿಕಾರದ ವೆಬ್ ಸೈಟ್‌ www.aai.aero ವನ್ನು ತೆರೆದು career ವಿಭಾಗಕ್ಕೆ ಹೋಗಿ ನೋಡಿದರೆ ಸಮಗ್ರ ವಿವರಗಳು ಲಭ್ಯ.

ಎರಡೂ ಹುದ್ದೆಗಳಿಗೆ ಹೆಣ್ಣು ಮಕ್ಕಳಿಗೂ  ಅವಕಾಶವಿದೆ! ಅದೂ ರಿಯಾಯತಿಯೊಂದಿಗೆ...! ಅರ್ಹರು ಪ್ರಯತ್ನಿಸಬಹುದು.

ಗಮನದಲ್ಲಿರಲಿ: ಇದು ಸರಕಾರಿ ಸ್ವಾಧೀನ ಸಂಸ್ಥೆಯ ನೇಮಕಾತಿ. ಪರೀಕ್ಷಾ ಶುಲ್ಕದ(ಅಲ್ಲಿ ಕೂಡಾ ನಿಯಮಗಳನ್ವಯ ರಿಯಾಯತಿ ಇದೆ) ಹೊರತು ಬೇರಾವುದೇ ರೀತಿಯ ಹಣ ಪಾವತಿ ಇರುವುದಿಲ್ಲ. ಈ ಉದ್ಯೋಗ ಪಡೆಯಲು ಅಭ್ಯರ್ಥಿಗಳ ಕಠಿಣ ಪ್ರಯತ್ನದ ಹೊರತು ಮಧ್ಯವರ್ತಿಗಳು ಅಥವಾ ಬೇರಾವುದೇ short cut  ಇಲ್ಲ.
ವೆಬ್ ಸೈಟ್‌ನಲ್ಲಿಯೇ ಸಂಪೂರ್ಣ ವಿವರಗಳು ಇಂಗ್ಲಿಷ್‌ನಲ್ಲಿ  ಲಭ್ಯ. ಅದನ್ನಷ್ಟೇ ಅನುಸರಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕಾರ Online ನಲ್ಲಿ ಮಾತ್ರ. ಈ ಬಗ್ಗೆ ಬೇರೆ ಯಾರನ್ನೂ ಸಂಪರ್ಕಿಸುವ ಅವಶ್ಯಕತೆ ಇಲ್ಲ.

ವಿ. ಸೂ:  ಈ ಹುದ್ದೆಗಳಲ್ಲಿ ಈಗಾಗಲೇ ಇರುವ ಹೆಚ್ಚಿನವರು ಹೊರರಾಜ್ಯದವರು.  ನಮ್ಮ ಊರಲ್ಲೇ ನಮ್ಮ ಸುತ್ತ ಮುತ್ತ ನೂರಾರು ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿದ್ದಾರೆ. ಈ ವಿಷಯ  ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ತಲುಪಲು ಸಹಕರಿಸಿ.
Last date: 15. 7.18

ಕನ್ನಡ ಭಾಷೆಯಲ್ಲಿ ಹೆಚ್ಚಿನ ಮಾಹಿತಿಗಾಗಿ vr4safety@gmail.com ಗೆ ಈಮೇಲ್ ಕಳುಹಿಸಿರಿ.

ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

🌺🌺🌺🌺🌺🌺🌺🌺

*ಮಾನ್ಯರೇ,*

*ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ ದೇಶದ ಪ್ರತೀ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಈ ಕೆಳಗಿನ ಉಚಿತ ತರಬೇತಿಗಳು ನಡೆಯಲಿರುವುದು.*

1⃣
*ಕಂಪ್ಯೂಟರೈಸ್ ಡ್ ಎಕೌಂಟಿಂಗ್*
*16/07/2018 ರಿಂದ 14/08/2018ರ ವರೆಗೆ*
*ತರಬೇತಿ ಅವಧಿ - 30 ದಿನಗಳು*

2⃣
*ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ*
*23/07/2018 ರಿಂದ 21/08/2018ರ ವರೆಗೆ*
*ತರಬೇತಿ ಅವಧಿ - 30 ದಿನಗಳು*

3⃣
*ಕಂಪ್ಯೂಟರ್ ಡಿ.ಟಿ.ಪಿ*
*16/08/2018 ರಿಂದ 29/09/2018ರ ವರೆಗೆ*
*ತರಬೇತಿ ಅವಧಿ - 45 ದಿನಗಳು*

4⃣
*ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ*
*04/07/2018 ರಿಂದ 16/07/2018ರ ವರೆಗೆ*
*ತರಬೇತಿ ಅವಧಿ - 13 ದಿನಗಳು*

5⃣
*ಬ್ಯೂಟಿ ಪಾರ್ಲರ್ (ಮಹಿಳೆಯರಿಗೆ)*
*02/08/2018 ರಿಂದ 31/08/2018ರ ವರೆಗೆ*
*ತರಬೇತಿ ಅವಧಿ - 30 ದಿನಗಳು*

6⃣
*ಸಿ.ಸಿ.ಕ್ಯಾಮರಾ ಅಳವಡಿಸುವಿಕೆ*
*20/08/2018 ರಿಂದ 01/09/2018ರ ವರೆಗೆ*
*ತರಬೇತಿ ಅವಧಿ - 13 ದಿನಗಳು*

*ಈ ಮೇಲಿನ ಎಲ್ಲಾ ತರಬೇತಿಗಳಿಗೆ,*
*ವಯೋಮಿತಿ:- 18 ರಿಂದ 45ವರ್ಷಗಳು*

*ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಯುವಕ/ಯುವತಿಯರಿಗೆ ಮಾತ್ರ ಅವಕಾಶ.*

*ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*

*ಆಸಕ್ತರು ಈ ಕೆಳಗಿನ ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸ ಬಹುದು.*
*www.rudsetujire.com*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-*
*RUDSET Institute,*
*Siddhavana, Ujire.*
☎ *08256 236404*

*ದಯಮಾಡಿ ಈ ಸಂದೇಶವನ್ನು ನಿಮ್ಮ ಎಲ್ಲಾ WhatsApp ಗ್ರೂಪ್ ಗಳಿಗೆ ಶೇರ್ ಮಾಡಿ ಉದ್ಯೋಗಾಕಾಂಕ್ಷಿಗಳಿಗೆ ಸಹಾಯ ಮಾಡಿ.*

🌺🌺🌺🌺🌺🌺🌺🌺

Wednesday 27 June 2018

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
Posted By: Nishmitha
Published:Sunday, June 24, 2018, 9:44 [IST]
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 10 ಕೊನೆಯ ದಿನಾಂಕ.

powered by Rubicon Project
Error loading media:
Error loading media:
ಕೇಂದ್ರ ಲೋಕಾ ಸೇವಾ ಆಯೋಗ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ   ಡೀಟೆಲ್ಸ್
ಹುದ್ದೆ ಹೆಸರು   ಹಲವಾರು ಹುದ್ದೆಗಳು
ಸಂಸ್ಥೆ   ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
ಸ್ಥಳ ಭಾರತ
ವಿದ್ಯಾರ್ಹತೆ   ಅಧಿಕೃತ ವಿಶ್ವವಿದ್ಯಾನಿಲಯದಿಂದ ಪದವಿ
ಕೌಶಲ್ಯ   ಮ್ಯಾನೇಜಿರಿಯಲ್ ಸ್ಕಿಲ್
ಇಂಡಸ್ಟ್ರಿ   ಪೋಸ್ಟಲ್
ಅನುಭವ   ತಿಳಿಸಿಲ್ಲ
ಹುದ್ದೆ ಸಂಖ್ಯೆ 18
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ   ಜೂನ್ 26, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ   ಜುಲೈ 10, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಬ್ಯಾಂಕ್ ಜಾಬ್ ನಿಮ್ಮದಾಗಬೇಕೆ.... ಹಲವಾರು ಬ್ಯಾಂಕ್‌ಗಳಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸ್ಟೆಪ್ 1: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಸ್ಕ್ರೋಲ್ ಡೌನ್ ಮಾಡಿ Opportunities ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 4: ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಅರ್ಜಿಯು ಜೂನ್ 26 ರಿಂದ ತೆರೆದುಕೊಳ್ಳುತ್ತದೆ. ಅರ್ಜಿಯನ್ನ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಮಾಡಿ

ಪದವೀಧರರಿಗೆ ಬ್ಯಾಂಕ್ ಆಫ್‌ ಬರೋಡಾದಲ್ಲಿ ಕೆಲಸವಿದೆ

Updated: Tue, Jun 26, 2018, 14:13 [IST]
ಬೆಂಗಳೂರು, ಜೂನ್ 26 : ಬ್ಯಾಂಕ್ ಆಫ್ ಬರೋಡ 600 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜುಲೈ 2, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬ್ಯಾಂಕ್ ಆಫ್ ಬರೋಡ Probationary Officer ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಾಗುತ್ತದೆ. ವೇತನ ಶ್ರೇಣಿ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.
50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಓಸಿಎಲ್
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಶೇ 55ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. (ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 50 ಅಂಕಗಳು).

ವಯೋಮಿತಿ : 20 ರಿಂದ 28 ವರ್ಷಗಳು 2 ಜುಲೈ 2018ಕ್ಕೆ ಅನ್ವಯವಾಗುವಂತೆ.
ಮಂಡ್ಯ ಜಿಲ್ಲಾ ಕೋರ್ಟಿನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ
ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 600 ರೂ., ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಲಿಖಿತ ಪರೀಕ್ಷೆ, ಗ್ರೂಪ್ ಡಿಸ್ಕಷನ್, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ | Oneindia Kannada
ಬೆಂಗಳೂರು, ಜೂನ್ 27 : ಸೌತ್ ಸೆಂಟ್ರಲ್ ರೈಲ್ವೆ 4103 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 17ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸೌತ್ ಸೆಂಟ್ರಲ್ ರೈಲ್ವೆ 2018-19ನೇ ಸಾಲಿಗೆ Apprentice ಹುದ್ದೆಗಳನ್ನೂ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಕೆಲಸ ಮಾಡಬೇಕು.
ಮಂಡ್ಯ ಜಿಲ್ಲಾ ಕೋರ್ಟಿನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 10 ನೇತರಗತಿ/ಎಸ್‌ಎಎಸ್‌ಸಿಯನ್ನು ಶೇ 50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಐಟಿಐಯಲ್ಲಿ ಸಂಬಂಧಿಸಿದ ಟ್ರೇಡ್‌ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 15 ರಿಂದ 24 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 18 ಜುಲೈ 2018ಕ್ಕೆ ಅನ್ವಯವಾಗುವಂತೆ. ವೇತನ ಶ್ರೇಣಿಯ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಪದವೀಧರರಿಗೆ ಬ್ಯಾಂಕ್ ಆಫ್‌ ಬರೋಡಾದಲ್ಲಿ ಕೆಲಸವಿದೆ
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಸಲ್ಲಿಸಲು ಜುಲೈ 17, 2018 ಕೊನೆಯ ದಿನವಾಗಿದೆ.

Tuesday 19 June 2018

Police Jobs


Police Jobs


Job News All in one


KSRTC Jobs


Job News


ಉಡುಪಿ ನ್ಯಾಯಲಯ


ಕರ್ನಾಟಕ ಪೋಲಿಸ್ ಇಲಾಖೆ


ಕರ್ನಾಟಕ ಅರಣ್ಯ ಇಲಾಖೆ


Friday 8 June 2018

ರೈಲ್ವೇ ಇಲಾಖೆಯಲ್ಲಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ರೈಲ್ವೇ ಇಲಾಖೆಯಲ್ಲಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

Published:Thursday, May 31, 2018, 16:23 [IST]
ಐಆರ್ ಸಿಓಎನ್ ಇಂಟರ್ ನ್ಯಾಷನಲ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೂಪರ್‌ವೈಸರ್ - ಕಂಪನಿ ಅಫೇರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 20, 2018 ಕೊನೆಯ ದಿನಾಂಕ.

ಐಆರ್ ಸಿಓಎನ್ ಇಂಟರ್ ನ್ಯಾಷನಲ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ   ಡೀಟೆಲ್ಸ್
ಹುದ್ದೆ ಹೆಸರು   ಸೂಪರ್‌ವೈಸರ್ - ಕಂಪನಿ ಅಫೇರ್ಸ್
ಸಂಸ್ಥೆ   ಐಆರ್ ಸಿಓಎನ್ ಇಂಟರ್ ನ್ಯಾಷನಲ್ ಲಿಮಿಟೆಡ್
ಸ್ಥಳ ನವದೆಹಲಿ
ವಿದ್ಯಾರ್ಹತೆ   ಐಸಿಎಸ್ ಐ ಯಲ್ಲಿ ಅಸೋಸಿಯೆಟ್ ಮೆಂಬರ್ಶಿಪ್ ಆಗಿರಬೇಕು
ವಯೋಮಿತಿ   30 ವರ್ಷ
ಕೌಶಲ್ಯ ಗುಡ್ ಕಮ್ಯುನಿಕೇಶನ್ ಸ್ಕಿಲ್
ವೇತನ ಶ್ರೇಣಿ   ರೂ. 35000
ಇಂಡಸ್ಟ್ರಿ   ರೈಲ್ವೇ ಇಲಾಖೆ
ಅನುಭವ   2 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಮೇ 30, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ   ಜೂನ್ 20, 2018
ಸಂದರ್ಶನ ದಿನಾಂಕ   ಜೂನ್ 27, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1: ಐಆರ್ ಸಿಓಎನ್ ಇಂಟರ್ ನ್ಯಾಷನಲ್ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: HR & CAREER ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: Career & IRCON ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: Contract Employement ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 6: ಸೂಪರ್‌ ವೈಸರ್ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7: ಪರದೆ ಮೇಲೆ ಹುದ್ದೆಯ ಕಂಪ್ಲೀಟ್ ಮಾಹಿತಿ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 8: ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 9: ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದು, ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಪೋಸ್ಟ್ ಮಾಡಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
DGM/HRM
Ircon International Ltd.,
C-4, District Centre,
Saket New Delhi- 110 017

ಓಎನ್ ಜಿಸಿಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ!

ಓಎನ್ ಜಿಸಿಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ!

Published:Friday, June 1, 2018, 17:35 [IST]
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 18, 2018 ಕೊನೆಯ ದಿನಾಂಕ.

ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ವರ್ಗ ಡೀಟೆಲ್ಸ್
ಹುದ್ದೆ ಹೆಸರು ಫೀಲ್ಡ್ ಮೆಡಿಕಲ್ ಆಫೀಸರ್, ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ವಿಸಿಟಿಂಗ್ ಸ್ಪೇಶಾಲಿಸ್ಟ್
ಸಂಸ್ಥೆ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಲಿಮಿಟೆಡ್
ಹುದ್ದೆ ಸಂಖ್ಯೆ 77
ಸ್ಥಳ   ಮುಂಬಯಿ
ವಿದ್ಯಾರ್ಹತೆ ವಿಸಿಟಿಂಗ್ ಸ್ಪೇಶಾಲಿಸ್ಟ್ ಹುದ್ದೆಗೆ ಎಂಡಿ ಅಥವಾ ಎಂಎಸ್ , ಉಳಿದ ಹುದ್ದೆಗೆ ಎಂಬಿಬಿಎಸ್
ವಯೋಮಿತಿ   ಮಹಿಳೆಗೆ 45 ಹಾಗೂ ಪುರುಷರಿಗೆ 60
ಕೌಶಲ್ಯ ಕ್ಲಿನಿಕಲ್ ಜಡ್ಜ್ ಮೆಂಟ್
ವೇತನ   ರೂ. 75000 ಹಾಗೂ ವಿಸಿಟಿಂಗ್ ಸ್ಪೇಶಾಲಿಸ್ಟ್ ಗೆ ಪ್ರತಿ ವಿಸಿಟ್ ಗೆ 2000 ರೂ
ಇಂಡಸ್ಟ್ರಿ ಮೆಡಿಸಿನ್
ಅನುಭವ ತಿಳಿಸಿಲ್ಲ
ಸಂದರ್ಶನ   ಜೂನ್ 1, 2018 ರಿಂದ ಜೂನ್ 18, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1: ಓಎನ್ ಜಿಸಿ ಗೂಗಲ್ ಫಾರ್ಮ್ ಗೆ ಲಾಗಿನ್ ಆಗಿ
ಸ್ಟೆಪ್ 2: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 3: ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 4: ರಿಜಿಸ್ಟ್ರೇಶನ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 5: ಸಂದರ್ಶನ ವೇಳೆ ಬಯೋಡಾಟ ಹಾಗೂ ಇತರ ದಾಖಲೆಗಳ ಜತೆ ಹಾಜರಾಗಿ

ದಿ ಇಂಡಿಯನ್ ಏರ್‌ಪೋರ್ಸ್ ನಲ್ಲಿ 184 ಹುದ್ದೆಗೆ ಅರ್ಜಿ ಆಹ್ವಾನ!

ದಿ ಇಂಡಿಯನ್ ಏರ್‌ಪೋರ್ಸ್ ನಲ್ಲಿ 184 ಹುದ್ದೆಗೆ ಅರ್ಜಿ ಆಹ್ವಾನ!

Published:Saturday, June 2, 2018, 9:58 [IST]
ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೈಟ್ ಇಂಜಿನೀಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 11, 2018 ಕೊನೆಯ ದಿನಾಂಕ.


powered by Rubicon Project
ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ   ಡೀಟೆಲ್ಸ್
ಬ್ರ್ಯಾಂಚ್ ಹೆಸರು ಸೈಟ್ ಇಂಜಿನಿಯರ್

ಸಂಸ್ಥೆ   ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ
ಸ್ಥಳ   ಭಾರತ
ವಿದ್ಯಾರ್ಹತೆ ಬಿಇ ಪದವಿ( ನಿವೃತ್ತ ಇಂಜಿನಿಯರ್ ನೌಕರರು)
ವಯೋಮಿತಿ 63 ವರ್ಷ
ಕೌಶಲ್ಯ   ಟೆಕ್ನಿಕ್ ಸ್ಕಿಲ್
ಇಂಡಸ್ಟ್ರಿ   ಇಂಜಿನಿಯರಿಂಗ್
ಅನುಭವ   ತಿಳಿಸಿಲ್ಲ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ   ಮೇ.30, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ   ಜೂನ್ 11, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1: ಏರ್‌ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:ಪರದೆ ಮೇಲೆ ಹುದ್ದೆಯ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
ಸ್ಟೆಪ್ 4: Engagement of Site Engineer/ Consultant in Engineering Civil/ Electrical Department at AAI, Eastern Region. ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಹುದ್ದೆಯ ಸೂಚನೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
ಸ್ಟೆಪ್ 6: ಪೇಜ್‌ನ ಕೆಳಭಾಗದಲ್ಲಿ ಸ್ಕ್ರೋಲ್ ಡೌನ್ ಮಾಡಿಕೊಂಡು ಅರ್ಜಿಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 7: ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದುಕೊಳ್ಳಿ. ಹಾಗೂ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 8: ಭರ್ತಿ ಮಾಡಿದ ಅರ್ಜಿಯನ್ನ ಎಎಐ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ಪೋಸ್ಟ್ ಮಾಡಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

General Manager (HR) - ER
Airports Authority of India,
New Operational Building
RHQ (ER), Kolkata - 700052
E-mail: harbirsingh@aai.aero

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

ಇಂಡಿಯನ್ ನೇವಿಯಲ್ಲಿ ಅರ್ಜಿ ಆಹ್ವಾನ... ಈ ಕೂಡಲೇ ಅರ್ಜಿ ಸಲ್ಲಿಸಿ!

Published:Monday, June 4, 2018, 17:25 [IST]
ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಕೆಡೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 21, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಇಂಡಿಯನ್ ನೇವಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ   ಡೀಟೆಲ್ಸ್
ಹುದ್ದೆ ಕೆಡೆಟ್
ಸಂಸ್ಥೆ   ಇಂಡಿಯನ್ ನೇವಿ
ವಿದ್ಯಾರ್ಹತೆ   ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಪಾಸಾಗಿರಬೇಕು
ಸ್ಥಳ   ಭಾರತ
ವಯೋಮಿತಿ ಜುಲೈ 2, 1999 ಮತ್ತು ಜನವರಿ 1, 2002 ಮಧ್ಯೆ
ಹುಟ್ಟಿದವರಾಗಿರಬೇಕು

ಕೌಶಲ್ಯ   ಫಿಸಿಕಲ್ ಫಿಟ್ ನೆಸ್
ಇಂಡಸ್ಟ್ರಿ   ನೇವಿ
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ   ಜೂನ್ 2, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ   ಜೂನ್ 21, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1: ಇಂಡಿಯನ್ ನೇವಿ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ರಿಜಿಸ್ಟರ್ ಬಟನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ರಿಜಿಸ್ಟರ್ ಅರ್ಜಿ ಪರದೆ ಮೇಲೆ ಮೂಡುತ್ತದೆ, ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5: ಐಡಿ ಹಾಗೂ ವಿಳಾಸ ಪ್ರೂಫ್ ಅಪ್‌ಲೋಡ್ ಮಾಡಿ
ಸ್ಟೆಪ್ 6: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
ಸ್ಟೆಪ್ 7: ಸೇವ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 8: ಹೋಮ್ ಪೇಜ್‌ಗೆ ಮತ್ತೆ ಹಿಂತಿರುಗಿ ಲಾಗಿನ್ ಆಗಿ ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಮಾಡಿ

ಯಾರಿಗೆ ಬೇಕು ಸರ್ಕಾರಿ ಕೆಲಸ... ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ಅರ್ಜಿ ಆಹ್ವಾನ

ಯಾರಿಗೆ ಬೇಕು ಸರ್ಕಾರಿ ಕೆಲಸ... ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ಅರ್ಜಿ ಆಹ್ವಾನ

Published:Tuesday, June 5, 2018, 9:27 [IST]
ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ಹುದ್ದೆಯ ಪ್ರಕಟಣೆ ಹೊರಡಿಸಿದೆ. ಟ್ರೇಡ್ಸ್ ಮ್ಯಾನ್ ಮೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಜೂನ್ 23, 2018 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.


powered by Rubicon Project
ಮಿನಿಸ್ಟ್ರಿ ಆಫ್ ಡಿಫೆನ್ಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್
ವರ್ಗ   ಡೀಟೆಲ್ಸ್
ಹುದ್ದೆ   ಟ್ರೇಡ್ಸ್ ಮ್ಯಾನ್ ಮೇಟ್
ಸಂಸ್ಥೆ   ಮಿನಿಸ್ಟ್ರಿ ಆಫ್ ಡಿಫೆನ್ಸ್
ವಿದ್ಯಾರ್ಹತೆ 10 ನೇ ತರಗತಿ ಪಾಸಾಗಿರಬೇಕು
ಸ್ಥಳ   ಭಾರತ
ಇಂಡಸ್ಟ್ರಿ   ಡಿಫೆನ್ಸ್
ಅನುಭವ ತಿಳಿಸಿಲ್ಲ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ ಜೂನ್ 2, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಜೂನ್ 23, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1: ಮಿನಿಸ್ಟ್ರಿ ಆಫ್ ಡಿಫೆನ್ಸ್ ಆಫೀಶಿಯಲ್ ಜಾಬ್ ಜಾಹೀರಾತು ಸೈಟ್‌ಗೆ ಲಾಗಿನ್ ಆಗಿ
ಸ್ಟೆಪ್ 2: ಪೇಜ್‌ನ ಕೆಳಭಾಗದಲ್ಲಿ ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
ಸ್ಟೆಪ್ 3: ಅರ್ಜಿಯನ್ನ ಡೌನ್‌ಲೋಡ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಸ್ಟೆಪ್ 4: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5: ಬಳಿಕ ಮಿನಿಸ್ಟ್ರಿ ಆಫ್ ಡಿಫೆನ್ಸ್ ಇಲಾಖೆಗೆ ಅರ್ಜಿಯನ್ನ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ಬರೆದು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

Commanding Officer 56 Infantry Divisional
Ordnance Unit, PIN- 909056, c/o 99 APO

ಐಬಿಪಿಎಸ್ ನೇಮಕಾತಿ 10190 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಐಬಿಪಿಎಸ್ ನೇಮಕಾತಿ 10190 ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

Published:Friday, June 8, 2018, 9:30 [IST]
ಇನ್‌ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 2, 2018 ಕೊನೆಯ ದಿನಾಂಕ.

powered by Rubicon Project

ಇನ್‌ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ  ಡೀಟೆಲ್ಸ್
ಹುದ್ದೆ ಹೆಸರು ಆಫೀಸ್ ಅಸಿಸ್ಟೆಂಟ್ ಹಾಗೂ ಆಫೀಸರ್
ಸಂಸ್ಥೆ  ಇನ್‌ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್
ಸ್ಥಳ  ಭಾರತ
ವಿದ್ಯಾರ್ಹತೆ  ಅಧಿಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ
ವಯೋಮಿತಿ  18 ರಿಂದ 40 ವರ್ಷ
ಕೌಶಲ್ಯ ಬ್ಯಾಂಕಿಂಗ್ ಸ್ಕಿಲ್
ವೇತನ ಶ್ರೇಣಿ ರೂ.7200 ರಿಂದ 28100 ರೂ
ಇಂಡಸ್ಟ್ರಿ  ಬ್ಯಾಂಕಿಂಗ್
ಅನುಭವ  ತಿಳಿಸಿಲ್ಲ
ಅರ್ಜಿ ಶುಲ್ಕ  ರೂ.600
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ  ಜೂನ್ 8, 2018
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ  ಜುಲೈ 2, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1: ಇನ್‌ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಅರ್ಜಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈ ಲಿಂಕ್ ಜೂನ್ ೮ ರಂದು ತೆರೆಯಲ್ಪಡುತ್ತದೆ
ಸ್ಟೆಪ್ 3: ರಿಜಿಸ್ಟ್ರೇಶನ್ ಫಾರ್ಮ್ ಭರ್ತಿ ಮಾಡಿ ಸಬ್‌ಮಿಟ್ ಮಾಡಿ

8 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಸುರಕ್ಷತಾ ದಳ

8 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಸುರಕ್ಷತಾ ದಳ

Updated: Thu, May 24, 2018, 14:29 [IST]
ಬೆಂಗಳೂರು, ಮೇ 24 : ಆರ್‌ಪಿಎಫ್‌ 8619 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಜೂನ್ 30, 2018 ಕೊನೆಯ ದಿನವಾಗಿದೆ.

ರೈಲ್ವೆ ಸುರಕ್ಷತಾ ದಳ (ಆರ್‌ಪಿಎಫ್‌) 8619 ಪುರುಷ ಮತ್ತು ಮಹಿಳಾ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ/ಮ್ಯಾಟ್ರಿಕ್ಸ್ ನಲ್ಲಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಪರೀಕ್ಷಾ ಮಾಂಡಳಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವೇತನ ಶ್ರೇಣಿ 21,700 ರೂ.ಗಳು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1/7/208ಕ್ಕೆ ಅನ್ವಯವಾಗುವಂತೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 500ರೂ.ಗಳ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ನಿವೃತ್ತ ಯೋಧರು/ಮಹಿಳಾ/ಅತ್ಯಂತ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 250 ರೂ.ಗಳ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಪದವೀಧರರು ಆರ್‌ಪಿಎಫ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ

ಪದವೀಧರರು ಆರ್‌ಪಿಎಫ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ

Updated: Mon, May 28, 2018, 11:28 [IST]
ಬೆಂಗಳೂರು, ಮೇ 28 : ಆರ್‌ಪಿಎಫ್ 1120 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 30, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

powered by Rubicon Project

ರೈಲ್ವೆ ಸುರಕ್ಷತಾ ದಳ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಸಬ್ ಇನ್ಸ್‌ಪೆಕ್ಟರ್ (ಲೆವೆಲ್ 6 ಆಫ್ 7ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್ ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಭಾರತದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
8 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಸುರಕ್ಷತಾ ದಳ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವೇತನ ಶ್ರೇಣಿ 35,400 ರೂ.ಗಳು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 25 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. 1/7/2018ಕ್ಕೆ ಅನ್ವಯವಾಗುವಂತೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 05, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.
NTPC ಯಲ್ಲಿ ಡಿಪ್ಲೊಮಾ ಇಂಜಿನಿಯರ್ ಹುದ್ದೆಗೆ ಅರ್ಜಿ ಹಾಕಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ರೆಡಿಟ್, ಡೆಬಿಟ್, ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ನಿವೃತ್ತ ಯೋಧರು/ಮಹಿಳೆಯರು/ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳು 500 ರೂ. ಶುಲ್ಕವನ್ನು ಪಾವತಿ ಮಾಡಬೇಕು.

ಪದವಿ ಪಡೆದವರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಖಾಲಿ ಇದೆ

ಪದವಿ ಪಡೆದವರಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಖಾಲಿ ಇದೆ

Published:May 29 2018, 11:16 [IST]
ಬೆಂಗಳೂರು, ಮೇ 29 : ಕರ್ನಾಟಕ ರಾಜ್ಯ ಪೊಲೀಸ್ 45 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 15, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

powered by Rubicon Project

ಕರ್ನಾಟಕ ರಾಜ್ಯ ಪೊಲೀಸ್ ಎಸ್‌ಐ, ಎಸ್‌ಆರ್‌ಎಸ್‌ಐ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಎಸ್‌ಐ (ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) 17 ಹುದ್ದೆಗಳು. ಎಸ್‌ಆರ್‌ಎಸ್ಐ (ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ) 28 ಹುದ್ದೆಗಳಿವೆ.
8 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಸುರಕ್ಷತಾ ದಳ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ನೀಡಿದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ರಿಂದ 26 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 15 ಜೂನ್ 2018ಕ್ಕೆ ಅನ್ವಯವಾಗುವಂತೆ.

ಅರ್ಜಿ ಸಲ್ಲಿಸುವ ಸಾಮಾನ್ಯ, ಓಬಿಸಿ (2ಎ,2ಬಿ,3ಎ,3ಬಿ) ವರ್ಗದ ಅಭ್ಯರ್ಥಿಗಳು 250 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಎಸ್‌ಸಿ/ಎಸ್‌ಟಿ/ಪ್ರವರ್ಗ-1ರ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಪಾವತಿಸಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ : 25 ಮೇ 2108.
ಅರ್ಜಿ ಸಲ್ಲಿಕೆ ಕೊನೆ ದಿನಾಂಕ 15 ಜೂನ್ 2018
ಶುಲ್ಕ ಪಾವತಿಸಲು ಕೊನೆ ದಿನಾಂಕ 18 ಜೂನ್ 2018