Friday 8 June 2018

ಗ್ರಾಮೀಣ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ

ಗ್ರಾಮೀಣ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ

Updated: Fri, Jun 1, 2018, 21:16 [IST]
ದಾವಣಗೆರೆ, ಜೂನ್ 01: ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿ ಉತ್ಪನ್ನ ಮತ್ತು ಸೇವಾ ಚಟುವಟಿಕೆ
ಗಳನ್ನು ಕೈಗೊಳ್ಳಲು ಸ್ಥಳೀಯ ಹಣಕಾಸು/ಬ್ಯಾಂಕ್ ಗಳಿಂದ ಸ್ವ-ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡಲು ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ/ಯುವತಿಯರಿಂದ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

2018-19 ನೇ ಸಾಲಿನ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಜೂನ್ 30 ರೊಳಗಾಗಿ ಆನ್ ಲೈನ್ ನಲ್ಲಿ (www.cmegp.kar.nic.in) ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಸಾಮಾನ್ಯ ವರ್ಗ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ
* ವಿಶೇಷ ವರ್ಗ ಗರಿಷ್ಠ 45 ವರ್ಷ ವಯೋಮಿತಿಯೊಳಗಿನ ನಿರುದ್ಯೋಗಿ ಗ್ರಾಮೀಣ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು.

* ರೂ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಘಟಕ ಸ್ಥಾಪನೆಗೆ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.
ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಸಾಲ ಸೌಲಭ್ಯ (ಹೊಸದಾಗಿ ಘಟಕ ಪ್ರಾರಂಭಿಸಲು) ನೀಡಲಾಗುವುದು. ಕುಟುಂಬದ ಒಬ್ಬ ಸದಸ್ಯರು ಮಾತ್ರ ಸಾಲ ಪಡೆಯಲು ಅರ್ಹತೆ ಹೊಂದಿದ್ದು, ಈಗಾಗಲೇ ಇನ್ನಾವುದೇ ಸರ್ಕಾರದ ಯೋಜನೆಯಡಿ ಸಾಲ ಪಡೆದಿರುವ ಘಟಕಗಳು ಅರ್ಹತೆ ಹೊಂದಿರುವುದಿಲ್ಲ.

powered by Rubicon Project

ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಯೊಂದಿಗೆ ಎಲ್ಲ ದಾಖಲೆಗಳನ್ನು ಲಗತ್ತಿಸಿ ದ್ವಿ-ಪ್ರತಿಯಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಪ್ಲಾಟ್ ನಂ:76-ಎ(ಪಿ1) ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ ರಸ್ತೆ, ದಾವಣಗೆರೆ-06 ಇವರಿಗೆ ಸಲ್ಲಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಈ ಕಚೇರಿಯನ್ನು ಸಂಪರ್ಕಿಸ ಬಹುದೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು
ತಿಳಿಸಿದ್ದಾರೆ.

No comments:

Post a Comment