Thursday 28 June 2018

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದಲ್ಲಿ ಉದ್ಯೋಗ

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (Airports Authority of India)ದಲ್ಲಿ1.  Jr. Assistant (Fire Services) ಹಾಗೂ
2.  Sr. Assistant (Electronics) ಹುದ್ದೆಗಳಿಗೆ Online ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಹತೆ:
1. Jr. Asst. (FS) -- i) ಪಿ. ಯು. ಸಿ. ಅಥವಾ ಆಟೋಮೊಬಾಯಿಲ್/ಮೆಕ್ಯಾನಿಕಲ್ ಅಥವಾ ಫ಼ಯರ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ (ಅಂಗೀಕೃತ -3 ವರ್ಷದ ಕೋರ್ಸ್) - ಕನಿಷ್ಟ 50% ಅಂಕಗಳೊಂದಿಗೆ.  ii) ವಾಹನ ಚಾಲನಾ ಲೈಸನ್ಸ್ (ಲಘು - 2 ವರ್ಷ, ಮಧ್ಯಮ - 1 ವರ್ಷ ಅಥವಾ ಭಾರೀ ( Heavy)- ಹೊಸತೂ ಅಗುತ್ತದೆ). iii) ದೈಹಿಕ ಕ್ಷಮತೆ (ನೋಟಿಸಿನಲ್ಲಿ ವಿವರಗಳಿವೆ).

ಲಿಖಿತ ಪರೀಕ್ಷೆ, ದೈಹಿಕ ಕ್ಷಮತಾ ಪರೀಕ್ಷೆ , ವಾಹನ ಚಾಲನೆಯ ಪರಿಣತಿಯ ಪರೀಕ್ಷೆ  ಹಾಗೂ ಸಂದರ್ಶನಗಳ ಮುಖಾಂತರ ನೇಮಕಾತಿ ಪ್ರಕ್ರಿಯ ಜರಗುತ್ತದೆ.

2. Sr. Asst. (Electronics)- i)ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯೂನಿಕೇಶನ್ ಅಥವಾ ರೇಡಿಯೋ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ.
ii) ಅದೇ ಕ್ಷೇತ್ರದಲ್ಲಿ  ಎರಡು ವರ್ಷಗಳ ಅನುಭವ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳ ಮುಖಾಂತರ ನೇಮಕಾತಿ ಪ್ರಕ್ರಿಯ ಜರಗುತ್ತದೆ.

ಎರಡೂ ಹುದ್ದೆಗಳಿಗೆ ಆಕರ್ಷಕ ವೇತನವಿದೆ. ವೇತನವು ಪರಿಷ್ಕರಣೆಯ ಹಂತದಲ್ಲಿದ್ದು ಒಟ್ಟು ಸಂಬಳ ಮಾಸಿಕ ರೂ. 50000 ದಿಂದ 60000ದ ವರೆಗೆ ಸಿಗುವುದು.
ಕನ್ನಡ ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ಯಾವುದೇ ಪ್ರಕಟಣೆ ಲಭ್ಯವಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಇದನ್ನು ಪ್ರಕಟಿಸುತ್ತಿದ್ದೇವೆ. ಹೆಚ್ಚಿನ ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನು ತಲುಪುವುದು ನಮ್ಮ ಉದ್ದೇಶ. ಈ ಬಗ್ಗೆ ಪ್ರಾಧಿಕಾರದ ವೆಬ್ ಸೈಟ್‌ www.aai.aero ವನ್ನು ತೆರೆದು career ವಿಭಾಗಕ್ಕೆ ಹೋಗಿ ನೋಡಿದರೆ ಸಮಗ್ರ ವಿವರಗಳು ಲಭ್ಯ.

ಎರಡೂ ಹುದ್ದೆಗಳಿಗೆ ಹೆಣ್ಣು ಮಕ್ಕಳಿಗೂ  ಅವಕಾಶವಿದೆ! ಅದೂ ರಿಯಾಯತಿಯೊಂದಿಗೆ...! ಅರ್ಹರು ಪ್ರಯತ್ನಿಸಬಹುದು.

ಗಮನದಲ್ಲಿರಲಿ: ಇದು ಸರಕಾರಿ ಸ್ವಾಧೀನ ಸಂಸ್ಥೆಯ ನೇಮಕಾತಿ. ಪರೀಕ್ಷಾ ಶುಲ್ಕದ(ಅಲ್ಲಿ ಕೂಡಾ ನಿಯಮಗಳನ್ವಯ ರಿಯಾಯತಿ ಇದೆ) ಹೊರತು ಬೇರಾವುದೇ ರೀತಿಯ ಹಣ ಪಾವತಿ ಇರುವುದಿಲ್ಲ. ಈ ಉದ್ಯೋಗ ಪಡೆಯಲು ಅಭ್ಯರ್ಥಿಗಳ ಕಠಿಣ ಪ್ರಯತ್ನದ ಹೊರತು ಮಧ್ಯವರ್ತಿಗಳು ಅಥವಾ ಬೇರಾವುದೇ short cut  ಇಲ್ಲ.
ವೆಬ್ ಸೈಟ್‌ನಲ್ಲಿಯೇ ಸಂಪೂರ್ಣ ವಿವರಗಳು ಇಂಗ್ಲಿಷ್‌ನಲ್ಲಿ  ಲಭ್ಯ. ಅದನ್ನಷ್ಟೇ ಅನುಸರಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕಾರ Online ನಲ್ಲಿ ಮಾತ್ರ. ಈ ಬಗ್ಗೆ ಬೇರೆ ಯಾರನ್ನೂ ಸಂಪರ್ಕಿಸುವ ಅವಶ್ಯಕತೆ ಇಲ್ಲ.

ವಿ. ಸೂ:  ಈ ಹುದ್ದೆಗಳಲ್ಲಿ ಈಗಾಗಲೇ ಇರುವ ಹೆಚ್ಚಿನವರು ಹೊರರಾಜ್ಯದವರು.  ನಮ್ಮ ಊರಲ್ಲೇ ನಮ್ಮ ಸುತ್ತ ಮುತ್ತ ನೂರಾರು ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿದ್ದಾರೆ. ಈ ವಿಷಯ  ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ತಲುಪಲು ಸಹಕರಿಸಿ.
Last date: 15. 7.18

ಕನ್ನಡ ಭಾಷೆಯಲ್ಲಿ ಹೆಚ್ಚಿನ ಮಾಹಿತಿಗಾಗಿ vr4safety@gmail.com ಗೆ ಈಮೇಲ್ ಕಳುಹಿಸಿರಿ.

No comments:

Post a Comment