Thursday, 28 June 2018

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದಲ್ಲಿ ಉದ್ಯೋಗ

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (Airports Authority of India)ದಲ್ಲಿ1.  Jr. Assistant (Fire Services) ಹಾಗೂ
2.  Sr. Assistant (Electronics) ಹುದ್ದೆಗಳಿಗೆ Online ಮುಖಾಂತರ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಹತೆ:
1. Jr. Asst. (FS) -- i) ಪಿ. ಯು. ಸಿ. ಅಥವಾ ಆಟೋಮೊಬಾಯಿಲ್/ಮೆಕ್ಯಾನಿಕಲ್ ಅಥವಾ ಫ಼ಯರ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ (ಅಂಗೀಕೃತ -3 ವರ್ಷದ ಕೋರ್ಸ್) - ಕನಿಷ್ಟ 50% ಅಂಕಗಳೊಂದಿಗೆ.  ii) ವಾಹನ ಚಾಲನಾ ಲೈಸನ್ಸ್ (ಲಘು - 2 ವರ್ಷ, ಮಧ್ಯಮ - 1 ವರ್ಷ ಅಥವಾ ಭಾರೀ ( Heavy)- ಹೊಸತೂ ಅಗುತ್ತದೆ). iii) ದೈಹಿಕ ಕ್ಷಮತೆ (ನೋಟಿಸಿನಲ್ಲಿ ವಿವರಗಳಿವೆ).

ಲಿಖಿತ ಪರೀಕ್ಷೆ, ದೈಹಿಕ ಕ್ಷಮತಾ ಪರೀಕ್ಷೆ , ವಾಹನ ಚಾಲನೆಯ ಪರಿಣತಿಯ ಪರೀಕ್ಷೆ  ಹಾಗೂ ಸಂದರ್ಶನಗಳ ಮುಖಾಂತರ ನೇಮಕಾತಿ ಪ್ರಕ್ರಿಯ ಜರಗುತ್ತದೆ.

2. Sr. Asst. (Electronics)- i)ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯೂನಿಕೇಶನ್ ಅಥವಾ ರೇಡಿಯೋ ಇಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ.
ii) ಅದೇ ಕ್ಷೇತ್ರದಲ್ಲಿ  ಎರಡು ವರ್ಷಗಳ ಅನುಭವ.
ಲಿಖಿತ ಪರೀಕ್ಷೆ ಹಾಗೂ ಸಂದರ್ಶನಗಳ ಮುಖಾಂತರ ನೇಮಕಾತಿ ಪ್ರಕ್ರಿಯ ಜರಗುತ್ತದೆ.

ಎರಡೂ ಹುದ್ದೆಗಳಿಗೆ ಆಕರ್ಷಕ ವೇತನವಿದೆ. ವೇತನವು ಪರಿಷ್ಕರಣೆಯ ಹಂತದಲ್ಲಿದ್ದು ಒಟ್ಟು ಸಂಬಳ ಮಾಸಿಕ ರೂ. 50000 ದಿಂದ 60000ದ ವರೆಗೆ ಸಿಗುವುದು.
ಕನ್ನಡ ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ಯಾವುದೇ ಪ್ರಕಟಣೆ ಲಭ್ಯವಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಇದನ್ನು ಪ್ರಕಟಿಸುತ್ತಿದ್ದೇವೆ. ಹೆಚ್ಚಿನ ಸ್ಥಳೀಯ ಉದ್ಯೋಗಾಕಾಂಕ್ಷಿಗಳನ್ನು ತಲುಪುವುದು ನಮ್ಮ ಉದ್ದೇಶ. ಈ ಬಗ್ಗೆ ಪ್ರಾಧಿಕಾರದ ವೆಬ್ ಸೈಟ್‌ www.aai.aero ವನ್ನು ತೆರೆದು career ವಿಭಾಗಕ್ಕೆ ಹೋಗಿ ನೋಡಿದರೆ ಸಮಗ್ರ ವಿವರಗಳು ಲಭ್ಯ.

ಎರಡೂ ಹುದ್ದೆಗಳಿಗೆ ಹೆಣ್ಣು ಮಕ್ಕಳಿಗೂ  ಅವಕಾಶವಿದೆ! ಅದೂ ರಿಯಾಯತಿಯೊಂದಿಗೆ...! ಅರ್ಹರು ಪ್ರಯತ್ನಿಸಬಹುದು.

ಗಮನದಲ್ಲಿರಲಿ: ಇದು ಸರಕಾರಿ ಸ್ವಾಧೀನ ಸಂಸ್ಥೆಯ ನೇಮಕಾತಿ. ಪರೀಕ್ಷಾ ಶುಲ್ಕದ(ಅಲ್ಲಿ ಕೂಡಾ ನಿಯಮಗಳನ್ವಯ ರಿಯಾಯತಿ ಇದೆ) ಹೊರತು ಬೇರಾವುದೇ ರೀತಿಯ ಹಣ ಪಾವತಿ ಇರುವುದಿಲ್ಲ. ಈ ಉದ್ಯೋಗ ಪಡೆಯಲು ಅಭ್ಯರ್ಥಿಗಳ ಕಠಿಣ ಪ್ರಯತ್ನದ ಹೊರತು ಮಧ್ಯವರ್ತಿಗಳು ಅಥವಾ ಬೇರಾವುದೇ short cut  ಇಲ್ಲ.
ವೆಬ್ ಸೈಟ್‌ನಲ್ಲಿಯೇ ಸಂಪೂರ್ಣ ವಿವರಗಳು ಇಂಗ್ಲಿಷ್‌ನಲ್ಲಿ  ಲಭ್ಯ. ಅದನ್ನಷ್ಟೇ ಅನುಸರಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕಾರ Online ನಲ್ಲಿ ಮಾತ್ರ. ಈ ಬಗ್ಗೆ ಬೇರೆ ಯಾರನ್ನೂ ಸಂಪರ್ಕಿಸುವ ಅವಶ್ಯಕತೆ ಇಲ್ಲ.

ವಿ. ಸೂ:  ಈ ಹುದ್ದೆಗಳಲ್ಲಿ ಈಗಾಗಲೇ ಇರುವ ಹೆಚ್ಚಿನವರು ಹೊರರಾಜ್ಯದವರು.  ನಮ್ಮ ಊರಲ್ಲೇ ನಮ್ಮ ಸುತ್ತ ಮುತ್ತ ನೂರಾರು ಅರ್ಹ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳಿದ್ದಾರೆ. ಈ ವಿಷಯ  ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ತಲುಪಲು ಸಹಕರಿಸಿ.
Last date: 15. 7.18

ಕನ್ನಡ ಭಾಷೆಯಲ್ಲಿ ಹೆಚ್ಚಿನ ಮಾಹಿತಿಗಾಗಿ vr4safety@gmail.com ಗೆ ಈಮೇಲ್ ಕಳುಹಿಸಿರಿ.

ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

🌺🌺🌺🌺🌺🌺🌺🌺

*ಮಾನ್ಯರೇ,*

*ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಉದ್ಯೋಗವನ್ನು ಅರಸುತ್ತಿರುವವರಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕೆ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟ ದೇಶದ ಪ್ರತೀ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗವನ್ನು ಕಲ್ಪಿಸಿರುವ ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ಈ ಕೆಳಗಿನ ಉಚಿತ ತರಬೇತಿಗಳು ನಡೆಯಲಿರುವುದು.*

1⃣
*ಕಂಪ್ಯೂಟರೈಸ್ ಡ್ ಎಕೌಂಟಿಂಗ್*
*16/07/2018 ರಿಂದ 14/08/2018ರ ವರೆಗೆ*
*ತರಬೇತಿ ಅವಧಿ - 30 ದಿನಗಳು*

2⃣
*ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ*
*23/07/2018 ರಿಂದ 21/08/2018ರ ವರೆಗೆ*
*ತರಬೇತಿ ಅವಧಿ - 30 ದಿನಗಳು*

3⃣
*ಕಂಪ್ಯೂಟರ್ ಡಿ.ಟಿ.ಪಿ*
*16/08/2018 ರಿಂದ 29/09/2018ರ ವರೆಗೆ*
*ತರಬೇತಿ ಅವಧಿ - 45 ದಿನಗಳು*

4⃣
*ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ*
*04/07/2018 ರಿಂದ 16/07/2018ರ ವರೆಗೆ*
*ತರಬೇತಿ ಅವಧಿ - 13 ದಿನಗಳು*

5⃣
*ಬ್ಯೂಟಿ ಪಾರ್ಲರ್ (ಮಹಿಳೆಯರಿಗೆ)*
*02/08/2018 ರಿಂದ 31/08/2018ರ ವರೆಗೆ*
*ತರಬೇತಿ ಅವಧಿ - 30 ದಿನಗಳು*

6⃣
*ಸಿ.ಸಿ.ಕ್ಯಾಮರಾ ಅಳವಡಿಸುವಿಕೆ*
*20/08/2018 ರಿಂದ 01/09/2018ರ ವರೆಗೆ*
*ತರಬೇತಿ ಅವಧಿ - 13 ದಿನಗಳು*

*ಈ ಮೇಲಿನ ಎಲ್ಲಾ ತರಬೇತಿಗಳಿಗೆ,*
*ವಯೋಮಿತಿ:- 18 ರಿಂದ 45ವರ್ಷಗಳು*

*ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಯುವಕ/ಯುವತಿಯರಿಗೆ ಮಾತ್ರ ಅವಕಾಶ.*

*ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.*

*ಆಸಕ್ತರು ಈ ಕೆಳಗಿನ ವೆಬ್ ಸೈಟ್ ಮೂಲಕ ಆನ್ ಲೈನ್ ಅರ್ಜಿ ಸಲ್ಲಿಸ ಬಹುದು.*
*www.rudsetujire.com*
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-*
*RUDSET Institute,*
*Siddhavana, Ujire.*
☎ *08256 236404*

*ದಯಮಾಡಿ ಈ ಸಂದೇಶವನ್ನು ನಿಮ್ಮ ಎಲ್ಲಾ WhatsApp ಗ್ರೂಪ್ ಗಳಿಗೆ ಶೇರ್ ಮಾಡಿ ಉದ್ಯೋಗಾಕಾಂಕ್ಷಿಗಳಿಗೆ ಸಹಾಯ ಮಾಡಿ.*

🌺🌺🌺🌺🌺🌺🌺🌺

Wednesday, 27 June 2018

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ
Posted By: Nishmitha
Published:Sunday, June 24, 2018, 9:44 [IST]
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 10 ಕೊನೆಯ ದಿನಾಂಕ.

powered by Rubicon Project
Error loading media:
Error loading media:
ಕೇಂದ್ರ ಲೋಕಾ ಸೇವಾ ಆಯೋಗ ನೇಮಕಾತಿ... ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ   ಡೀಟೆಲ್ಸ್
ಹುದ್ದೆ ಹೆಸರು   ಹಲವಾರು ಹುದ್ದೆಗಳು
ಸಂಸ್ಥೆ   ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
ಸ್ಥಳ ಭಾರತ
ವಿದ್ಯಾರ್ಹತೆ   ಅಧಿಕೃತ ವಿಶ್ವವಿದ್ಯಾನಿಲಯದಿಂದ ಪದವಿ
ಕೌಶಲ್ಯ   ಮ್ಯಾನೇಜಿರಿಯಲ್ ಸ್ಕಿಲ್
ಇಂಡಸ್ಟ್ರಿ   ಪೋಸ್ಟಲ್
ಅನುಭವ   ತಿಳಿಸಿಲ್ಲ
ಹುದ್ದೆ ಸಂಖ್ಯೆ 18
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ   ಜೂನ್ 26, 2018
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ   ಜುಲೈ 10, 2018
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
ಬ್ಯಾಂಕ್ ಜಾಬ್ ನಿಮ್ಮದಾಗಬೇಕೆ.... ಹಲವಾರು ಬ್ಯಾಂಕ್‌ಗಳಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸ್ಟೆಪ್ 1: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2: ಸ್ಕ್ರೋಲ್ ಡೌನ್ ಮಾಡಿ Opportunities ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3:ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ
ಸ್ಟೆಪ್ 4: ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 5: ಅರ್ಜಿಯು ಜೂನ್ 26 ರಿಂದ ತೆರೆದುಕೊಳ್ಳುತ್ತದೆ. ಅರ್ಜಿಯನ್ನ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಮಾಡಿ

ಪದವೀಧರರಿಗೆ ಬ್ಯಾಂಕ್ ಆಫ್‌ ಬರೋಡಾದಲ್ಲಿ ಕೆಲಸವಿದೆ

Updated: Tue, Jun 26, 2018, 14:13 [IST]
ಬೆಂಗಳೂರು, ಜೂನ್ 26 : ಬ್ಯಾಂಕ್ ಆಫ್ ಬರೋಡ 600 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜುಲೈ 2, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬ್ಯಾಂಕ್ ಆಫ್ ಬರೋಡ Probationary Officer ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಾಗುತ್ತದೆ. ವೇತನ ಶ್ರೇಣಿ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.
50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಐಓಸಿಎಲ್
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಶೇ 55ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. (ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 50 ಅಂಕಗಳು).

ವಯೋಮಿತಿ : 20 ರಿಂದ 28 ವರ್ಷಗಳು 2 ಜುಲೈ 2018ಕ್ಕೆ ಅನ್ವಯವಾಗುವಂತೆ.
ಮಂಡ್ಯ ಜಿಲ್ಲಾ ಕೋರ್ಟಿನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ
ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 600 ರೂ., ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಲಿಖಿತ ಪರೀಕ್ಷೆ, ಗ್ರೂಪ್ ಡಿಸ್ಕಷನ್, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ

ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ | Oneindia Kannada
ಬೆಂಗಳೂರು, ಜೂನ್ 27 : ಸೌತ್ ಸೆಂಟ್ರಲ್ ರೈಲ್ವೆ 4103 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 17ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸೌತ್ ಸೆಂಟ್ರಲ್ ರೈಲ್ವೆ 2018-19ನೇ ಸಾಲಿಗೆ Apprentice ಹುದ್ದೆಗಳನ್ನೂ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಕೆಲಸ ಮಾಡಬೇಕು.
ಮಂಡ್ಯ ಜಿಲ್ಲಾ ಕೋರ್ಟಿನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 10 ನೇತರಗತಿ/ಎಸ್‌ಎಎಸ್‌ಸಿಯನ್ನು ಶೇ 50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಐಟಿಐಯಲ್ಲಿ ಸಂಬಂಧಿಸಿದ ಟ್ರೇಡ್‌ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 15 ರಿಂದ 24 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 18 ಜುಲೈ 2018ಕ್ಕೆ ಅನ್ವಯವಾಗುವಂತೆ. ವೇತನ ಶ್ರೇಣಿಯ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಪದವೀಧರರಿಗೆ ಬ್ಯಾಂಕ್ ಆಫ್‌ ಬರೋಡಾದಲ್ಲಿ ಕೆಲಸವಿದೆ
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಸಲ್ಲಿಸಲು ಜುಲೈ 17, 2018 ಕೊನೆಯ ದಿನವಾಗಿದೆ.