Showing posts with label KPSC. Show all posts
Showing posts with label KPSC. Show all posts

Tuesday, 6 March 2018

ಕೆಪಿಎಸ್​​ಸಿ ಪರೀಕ್ಷೆ ಭಾರಿ ಅಕ್ರಮ ಜಾಲ ಪತ್ತೆ, ಆರೋಪಿಗಳ ಬಂಧನ

ಕೆಪಿಎಸ್​​ಸಿ ಪರೀಕ್ಷೆ ಭಾರಿ ಅಕ್ರಮ ಜಾಲ ಪತ್ತೆ, ಆರೋಪಿಗಳ ಬಂಧನ

ಕಲಬುರಗಿ: ಕೆಪಿಎಸ್​ಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ಹಣ ಪಡೆದು, ಪರೀಕ್ಷೆ ವೇಳೆ ಫೋನ್ ಮೂಲಕ ಉತ್ತರ ನೀಡುತ್ತಿದ್ದವರ ಅಕ್ರಮ ಜಾಲ ಪತ್ತೆ ಹಚ್ಚಿದ ಪೊಲೀಸರು ಮಂಗಳವಾರ ಹಲವರನ್ನು ಬಂಧಿಸಿದ್ದಾರೆ.

ಅಶೋಕ್​ ನಗರದ ಪೊಲೀಸರ ತನಿಖೆ ವೇಳೆ ಸಿಕ್ಕ ಮಾಹಿತಿಯಂತೆ ಅಫ್ಜಲಪುರದ ಚಂದ್ರಕಾಂತ್ ಹರಳಯ್ಯ ಮತ್ತು ಭೀಮರಾಯ ಹೂವಿನಹಳ್ಖಿ ಸೇರಿ ಹಲವರನ್ನು ಬಂಧಿಸಿದ್ದಾರೆ. ಪೊಲೀಸ್​ ವಿಚಾರಣೆ ವೇಳೆ ಬಾಯಿ ಬಿಟ್ಟಿರುವ ಚಂದ್ರಕಾಂತ್​, ಪ್ರತಿ ಹುದ್ದೆಗೆ 10 ರಿಂದ 12 ಲಕ್ಷ ಪಡೆದು 450ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಪ್ರಾಥಮಿಕ ಶಾಲಾ ಶಿಕ್ಷಕ ನದಾಫ್​
ಫೆ. 25 ನಡೆದ ಎಫ್​​ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಉದ್ಯೋಗಾಕಾಂಕ್ಷಿಗಳು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಮಂಗಳವಾರ ಅಕ್ರಮ ಜಾಲದ ಪತ್ತೆ ಹಚ್ಚಿ ವಿಚಾರಣೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಪ್ರಾಥಮಿಕ ಶಾಲೆ ಶಿಕ್ಷಕ ನದಾಫ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

Friday, 2 March 2018

ಕೆಪಿಎಸ್‌ಸಿ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೆಪಿಎಸ್‌ಸಿ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

 KPSCRecruitmentಉದ್ಯೋಗಕೆಪಿಎಸ್‌ಸಿ

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್’ಸಿ)ವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿನ 30 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ : ಒಟ್ಟು ಹುದ್ದೆಗಳ ಸಂಖ್ಯೆ : 30
# ಗ್ರೂಪ್ ‘ಎ’ : ವ್ಯವಸ್ಥಾಪಕ ಐಟಿ – 01
# ಗ್ರೂಪ್ ‘ಬಿ’ :
ಪರಿಸರ ಸಹಾಯಕ ಅಧಿಕಾರಿ – 14
ಸಹಾಯಕ ವೈಜ್ಞಾನಿಕ ಅಧಿಕಾರಿ – 03
ಕಾನೂನು ಸಹಾಯಕ – 01
# ಗ್ರೂಪ್ ‘ಸಿ’ :
ವೈಜ್ಞಾನಿಕ ಸಹಾಯಕ – 04
ಪ್ರಥಮ ದರ್ಜೆ ಸಹಾಯಕರು – 01
ದ್ವಿತೀಯ ದರ್ಜೆ ಸಹಾಯಕರು – 04
ಕ್ಷೇತ್ರ ಸಹಾಯಕರು – 05

ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸಿಎಸ್/ಐಟಿ ವಿಷಯದಲ್ಲಿ ಬಿಇ/ಎಂಇ ಪದವಿ, ಕ್ರ.ಸಂ 2ರ ಹುದ್ದೆಗೆ ಎಂಎಸ್ಸಿ, ಎಂಇ/ಎಂ.ಟೆಕ್, ಬಿಇ/ಬಿ.ಟೆಕ್, ಕ್ರ.ಸಂ 3ರ ಹುದ್ದೆಗೆ ಎಂಎಸ್ಸಿ, ಕ್ರ.ಸಂ 4ರ ಹುದ್ದೆಗೆ ಕಾನೂನು ಪದವಿ, ಕ್ರ.ಸಂ 5ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪದವಿ, ಕ್ರ.ಸಂ 6ರ ಹುದ್ದೆಗೆ ಯಾವುದೇ ಪದವಿ, ಕ್ರ.ಸಂ 7ರ ಹುದ್ದೆಗೆ ಪಿಯುಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣದಲ್ಲಿ ಉತ್ತೀರ್ಣ, ಕ್ರ.ಸಂ 8ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷ, ಪ.ಜಾ, ಪ.ಪಂ, ಪ್ರ-1 ರ ಅಭ್ಯರ್ಥಿಗಳಿಗೆ 40 ವರ್ಷದ ವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಪ.ಜಾ, ಪ.ಪಂ, ಪ್ರ-1, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯ್ತಿ ಇದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-03-2018
ಶುಲ್ಕವನ್ನು ಪಾತಿಸಲು ಕೊನೆಯ ದಿನಾಂಕ : 26-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.kpsc.kar.nic.in ಗೆ ಭೇಟಿ ನೀಡಿ.

KPSC - ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ದಿನಾಂಕ- 25-02-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟ

🔹🔹🔹🔹🔹🔹🔹🔹🔹🔹🔹
👉🏿 *KPSC - ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ  ದಿನಾಂಕ- 25-02-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರ ಪ್ರಕಟ*

********************************

🌸👉🏿 *SUBJECT CODE-281*👇🏿
   http://kpsc.kar.nic.in/General%20Knowledge%20-%20281.pdf

********************************

🌸👉🏿 *SUBJECT CODE-282*👇🏿

http://kpsc.kar.nic.in/General%20Kannada%20-%20282.pdf

********************************

🌸👉🏿 *SUBJECT CODE-283*👇🏿

http://kpsc.kar.nic.in/General%20English%20-%20283.pdf

********************************

🌸 *INSTRUCTIONS TO CANDIDATES*👇🏿

http://kpsc.kar.nic.in/Instruction%20to%20Candidate%20FDA.pdf

********************************

🌸 *OBJECTION FORMAT*👇🏿

http://kpsc.kar.nic.in/CONSOLIDATED%20GK%20ENG%20KAN.pdf

********************************

ಐಟಿಐ, ಡಿಪ್ಲೊಮಾ ಓದಿದವರಿಗೆ ಭರ್ಜರಿ ಉದ್ಯೋಗ ಅವಕಾಶ..!

ಐಟಿಐ, ಡಿಪ್ಲೊಮಾ ಓದಿದವರಿಗೆ ಭರ್ಜರಿ ಉದ್ಯೋಗ ಅವಕಾಶ..!

ಕೆಪಿಎಸ್‌ಸಿಯಿಂದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿ ಖಾಲಿ ಇರುವ ಕಿರಿಯ ಅಧಿಕಾರಿಗಳ (ಜೂನಿಯರ್‌ ಟ್ರೇನಿಂಗ್‌ ಆಫೀಸರ್‌) ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ, ಡಿಪ್ಲೊಮಾ ಓದಿದವರಿಗೆ ಅವಕಾಶ

ಹುದ್ದೆಗಳ ವಿವರ
ಒಟ್ಟು ಹುದ್ದೆಗಳ ಸಂಖ್ಯೆ : 1,520
ಒಟ್ಟು ಹುದ್ದೆಗಳ ಪೈಕಿ 266 ಹುದ್ದೆಗಳನ್ನು ಹೈದರಾಬಾದ್‌-ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್‌ 20, 2018
ಶುಲ್ಕ ಪಾವತಿಗೆ ಕೊನೆಯ ದಿನಾಂಕ : ಮಾರ್ಚ್‌ 21, 2018

ವಿವರಗಳಿಗೆ ವೆಬ್‌: www.kpsc.kar.nic.in

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : http://www.kpscapps2.com/kpsc_jto_2018/notification.pdf

ಹುದ್ದೆಗಳ ವಿವರ

ಫಿಟ್ಟರ್‌, ಟರ್ನರ್‌, ಎಲೆಕ್ಟ್ರಾನಿಕ್‌ ಮೆಕ್ಯಾನಿಕ್‌, ಮೆಕ್ಯಾನಿಕ್‌ ಮೋಟಾರ್‌ ವೆಹಿಕಲ್‌, ಐಸಿಟಿಎಸ್‌ಎಂ, ಎಂಆರ್‌ಎಸಿ, ಎಂಜಿನಿಯರಿಂಗ್‌ ಡ್ರಾಯಿಂಗ್‌, ವರ್ಕ್‌ಶಾಪ್‌ ಕ್ಯಾಲ್ಕುಕುಲೇಷನ್‌ ಆ್ಯಂಡ್‌ ಸೈನ್ಸ್‌, ಮೆಕ್ಯಾನಿಕ್‌ ಡೀಸೆಲ್‌, ಇನ್‌ಸ್ಟ್ರುಮೆಂಟ್‌ ಮೆಕ್ಯಾನಿಕ್‌, ಎಲೆಕ್ಟ್ರೋಪ್ಲೇಟರ್‌, ಎಲೆಕ್ಟ್ರಿಷಿಯನ್‌, ಡ್ರೆಸ್‌ ಮೇಕಿಂಗ್‌, ಇಂಟೀರಿಯರ್‌ ಡಿಸೈನಿಂಗ್‌ ಆ್ಯಂಡ್‌ ಡೆಕೋರೇಷನ್‌, ಡ್ರಾಟ್ಸ್‌ಮನ್‌ (ಸಿವಿಲ್‌, ಮೆಕ್ಯಾನಿಕಲ್‌), ವೆಲ್ಡರ್‌, ಮಷಿನಿಸ್ಟ್‌, ಆರ್ಕಿಟೆಕ್ಚರಲ್‌ ಅಸಿಸ್ಟೆಂಟ್‌, ಕಾರ್ಪೆಂಟರ್‌, ಎಂಎಂಟಿಎಂ, ಸೆಕ್ರೆಟರಿಯಲ್‌ ಪ್ರ್ಯಾಕ್ಟೀಸ್‌ ಮತ್ತು ಪಿಪಿಒ.

ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿರಬೇಕು ಮತ್ತು ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಐಟಿಐ ಕೋರ್ಸ್‌ (ಎನ್‌ಟಿಸಿ ಮತ್ತು ಎನ್‌ಎಸಿ ಸರ್ಟಿಫಿಕೇಟ್‌) ಅಥವಾ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ (ಸಂಪೂರ್ಣ ವಿವರ ಅಧಿಸೂಚನೆಯಲ್ಲಿ ಲಭ್ಯ) ಪೂರ್ಣಗೊಳಿಸಿರಬೇಕು. ಇದರ ಜತಗೆ ಹುದ್ದೆಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಯಾವುದಾದರೂ ಟೆಕ್ನಿಕಲ್‌ ಟ್ರೈನಿಂಗ್‌ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಬೋಧಕರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕಾಗಿರುವುದು ಕಡ್ಡಾಯ.

ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಕ್ಕಿಂತ ಮತ್ತು ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ ವಯೋಮಿತಿ 40 ವರ್ಷ.

ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 600 ರೂ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 300 ರೂ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ನಿಗದಿತ ಶುಲ್ಕವನ್ನು ಅಂಚೆ ಕಚೇರಿಯ ವೇಳೆಯಲ್ಲಿ ಕರ್ನಾಟಕದ ಯಾವುದೇ ಎಲೆಕ್ಟ್ರಾನಿಕ್‌ ಅಂಚೆ ಕಚೇರಿಗಳಲ್ಲಿ ಪಾವತಿ ಮಾಡಬಹುದು.

Wednesday, 28 February 2018

ವಿಶೇಷ ರಿಸರ್ವ್ ಪೋಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) (ಹೈ-ಕ)-2017 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಅಹ್ವಾನ

ವಿಶೇಷ ರಿಸರ್ವ್ ಪೋಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) (ಹೈ-ಕ)-2017 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಅಹ್ವಾನ

ಈ ಕೆಳಗೆ ನಮೂದಿಸಿರುವ ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅವಶ್ಯಕತೆ ಹಾಗೂ ಸಂದರ್ಭಕ್ಕಅನುಗುಣವಾಗಿ ಬದಲಾವಣೆ ಮಾಡಲಾಗುವುದು.
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ.) (ಪುರುಷ)
(ಹೈ-ಕ) ಸ್ಥಳೀಯ - 100 ಹುದ್ದೆಗಳು
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‍ಟೇಬಲ್ (ಕೆ.ಎಸ್.ಆರ್.ಪಿ.) (ಪುರುಷ)
ಐ ಅರ ಬಿ ಘಟಕ (ಹೈ-ಕ) ಸ್ಥಳೀಯ - 319 ಹುದ್ದೆಗಳು
No. of posts:  419

Application Start Date:  Feb. 28, 2018

Application End Date:  March 29, 2018

Last Date for Payment:  March 21, 2018

Work Location:  ಕರ್ನಾಟಕ ರಾಜ್ಯ

Selection Procedure:  ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ,
ಲಿಖಿತ ಪರೀಕ್ಷೆ,
ಮೌಖಿಕ ಪರೀಕ್ಷೆ,
ವೈದ್ಯಕೀಯ ಪರೀಕ್ಷೆ.

Qualification:  ಎಸ್.ಎಸ್.ಎಲ್.ಸಿ. / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 19.03.2018 ಕ್ಕೆ ಹೊಂದಿರಬೇಕು.

Fee:  ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ 250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ¸ ಸೇರಿದ ಅಭ್ಯರ್ಥಿಗಳಿಗೆ 100/-

ನಿಗದಿತ ಶುಲ್ಕವನ್ನು State Bank of India ಅಥವಾ ಸ್ಥಳೀಯ ಅಂಚೆ ಕಚೇರಿ ಅಧಿಕೃತ ಶಾಖೆಗಳಲ್ಲಿ ಕಚೇರಿ ವೇಳೆಯಲ್ಲಿ ಚಲನ್ ನೀಡಿ ಹಣ ಪಾವತಿಸಬೇಕು.

Age Limit:  ಸಾಮಾನ್ಯ ಅಭ್ಯರ್ಥಿಗಳಿಗೆ:
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 19.03.2018 ಕ್ಕೆ ಅಭ್ಯರ್ಥಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.
ಅ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 27 ವರ್ಷಗಳು.
ಆ) ಇತರೆ ಅಭ್ಯರ್ಥಿಗಳಿಗೆ 25 ವರ್ಷಗಳು.
ಇ) ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷಗಳು.

Pay Scale:  ವೇತನ ಶ್ರೇಣಿ:
11600-200-12000-250-13000-300-14200-350-15600-400-17200-450-19000-500-21000

Click Here for official notification
Click here to apply online