Showing posts with label  ಕಾನ್ಸ್ಟೇಬಲ್. Show all posts
Showing posts with label  ಕಾನ್ಸ್ಟೇಬಲ್. Show all posts

Friday, 2 March 2018

419 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

419 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ

Govt JobsJobsKarnataka PoliceKSPPolice Recruitmentಕಾನ್ಸ್ಟೇಬಲ್ಪೊಲೀಸ್ ನೇಮಕಾತಿ

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯು 419 ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್’ಟೇಬಲ್ (ಕೆ.ಎಸ್.ಆರ್.ಪಿ) ಹುದ್ದೆಗಳಿಗೆ ಅರ್ಹ ಪುರುಷ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

1.ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್’ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) (ಹೈ-ಕ) ಸ್ಥಳೀಯ – 100
2.ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್’ಟೇಬಲ್ (ಕೆ.ಎಸ್.ಆರ್.ಪಿ) (ಪುರುಷ) ಐಆರ್’ಬಿ ಘಟಕ (ಹೈ-ಕ) ಸ್ಥಳೀಯ – 319
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ / 10ನೇ ತರಗತಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ನಿಗದಿಮಾಡಲಾಗಿದೆ. ಗರಿಷ್ಠ ವಯಸ್ಸನ್ನು ಸಾಮಾನ್ಯ ವರ್ಗದವರಿಗೆ 25 ವರ್ಷ, ಪ.ಜಾ, ಪ.ಪಂ, ಹಿಂದುಳಿದ ವರ್ಗದವರಿಗೆ 27 ವರ್ಷ, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷದವರೆಗೆ ನಿಗದಿಗೊಳಿಸಲಾಗಿದೆ.
ಶುಲ್ಕ : ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂ, ಪ,ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-03-2018
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 21-03-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.ksp.gov.in ಗೆ ಭೇಟಿ ನೀಡಿ.