Tuesday 6 March 2018

ಕೆಪಿಎಸ್​​ಸಿ ಪರೀಕ್ಷೆ ಭಾರಿ ಅಕ್ರಮ ಜಾಲ ಪತ್ತೆ, ಆರೋಪಿಗಳ ಬಂಧನ

ಕೆಪಿಎಸ್​​ಸಿ ಪರೀಕ್ಷೆ ಭಾರಿ ಅಕ್ರಮ ಜಾಲ ಪತ್ತೆ, ಆರೋಪಿಗಳ ಬಂಧನ

ಕಲಬುರಗಿ: ಕೆಪಿಎಸ್​ಸಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಾಂತರ ಹಣ ಪಡೆದು, ಪರೀಕ್ಷೆ ವೇಳೆ ಫೋನ್ ಮೂಲಕ ಉತ್ತರ ನೀಡುತ್ತಿದ್ದವರ ಅಕ್ರಮ ಜಾಲ ಪತ್ತೆ ಹಚ್ಚಿದ ಪೊಲೀಸರು ಮಂಗಳವಾರ ಹಲವರನ್ನು ಬಂಧಿಸಿದ್ದಾರೆ.

ಅಶೋಕ್​ ನಗರದ ಪೊಲೀಸರ ತನಿಖೆ ವೇಳೆ ಸಿಕ್ಕ ಮಾಹಿತಿಯಂತೆ ಅಫ್ಜಲಪುರದ ಚಂದ್ರಕಾಂತ್ ಹರಳಯ್ಯ ಮತ್ತು ಭೀಮರಾಯ ಹೂವಿನಹಳ್ಖಿ ಸೇರಿ ಹಲವರನ್ನು ಬಂಧಿಸಿದ್ದಾರೆ. ಪೊಲೀಸ್​ ವಿಚಾರಣೆ ವೇಳೆ ಬಾಯಿ ಬಿಟ್ಟಿರುವ ಚಂದ್ರಕಾಂತ್​, ಪ್ರತಿ ಹುದ್ದೆಗೆ 10 ರಿಂದ 12 ಲಕ್ಷ ಪಡೆದು 450ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಪ್ರಾಥಮಿಕ ಶಾಲಾ ಶಿಕ್ಷಕ ನದಾಫ್​
ಫೆ. 25 ನಡೆದ ಎಫ್​​ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೆಲ ಉದ್ಯೋಗಾಕಾಂಕ್ಷಿಗಳು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಮಂಗಳವಾರ ಅಕ್ರಮ ಜಾಲದ ಪತ್ತೆ ಹಚ್ಚಿ ವಿಚಾರಣೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಪ್ರಾಥಮಿಕ ಶಾಲೆ ಶಿಕ್ಷಕ ನದಾಫ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

No comments:

Post a Comment